FILM
ಮಾಡೆಲ್ ಉರ್ಫಿ ಜಾವೇದ್ ಗೆ ಮುಂಬೈ ಪೊಲೀಸರ ಬುಲಾವ್
ಮುಂಬೈ ಜನವರಿ 14: ಪಬ್ಲಿಕ್ ನಲ್ಲಿ ಅರೆ ಬರೆ ಬಟ್ಟೆ ತೊಟ್ಟು ತಿರುಗಾಡುತ್ತಿದ್ದ ನಟಿ ಮಾಡೆಲ್ ಉರ್ಫಿ ಜಾವೇದ್ ರನ್ನು ಮುಂಬೈ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
ಮುಂಬೈನ ಬೀದಿಗಳಲ್ಲಿ ತಮ್ಮ ದೇಹವನ್ನು ಪ್ರದರ್ಶನ ಮಾಡಿಕೊಂಡು ಓಡಾಡುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ದೂರು ನೀಡಿದ್ದರು. ಅಲ್ಲದೇ ಅವರ ದೇಹ ಪ್ರದರ್ಶನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಸ್ತುವಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ವಾಘ್ ನೀಡಿದ ದೂರಿನ ಸಂಬಂಧ, ವಿಚಾರಣೆಗೆ ಹಾಜರಾಗುವಂತೆ ಉರ್ಫಿ ಜಾವೇದ್ ಅವರಿಗೆ ತಿಳಿಸಿದ್ದೇವೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.