DAKSHINA KANNADA
ಉಪ್ಪಿನಂಗಡಿ – ಹಿಜಬ್ ವಿವಾದ 24 ವಿಧ್ಯಾರ್ಥಿನಿಯರು ಒಂದು ವಾರ ಅಮಾನತು

ಉಪ್ಪಿನಂಗಡಿ ಜೂನ್ 08: ಹಿಜಬ್ ವಿವಾದದ ಕೇಂದ್ರ ಬಿಂದುವಾಗಿರುವ ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಹಿಜಬ್ ಗೆ ಹಠ ಹಿಡಿದ 24 ವಿದ್ಯಾರ್ಥಿನಿಯರನ್ನು ಒಂದು ವಾರಗಳ ಕಾಲ ಕಾಲೇಜಿನ ಆಡಳಿತ ಮಂಡಳಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂದರು ಕೂಡ ಕೆಲ ವಿಧ್ಯಾರ್ಥಿಗಳ ಮತ್ತೆ ತರಗತಿಗೆ ಪ್ರವೇಶಕ್ಕೆ ಯತ್ನಿಸಿದ್ದರು. ಈ ಹಿನ್ನಲೆ ಅವರನ್ನು ಸೋಮವಾರ ಕಾಲೇಜ್ ನಿಂದ ಅಮಾನತುಗೊಳಿಸಲಾಗಿದೆ ಎಂದು ಪುತ್ತೂರು ಬಿಜೆಪಿ ಶಾಸಕ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಅಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. ಈ ನಡುವೆ ಅಮಾನತು ಬಗ್ಗೆ ಮಾಹಿತಿ ಇಲ್ಲ ಎಂದು ಕೆಲ ವಿಧ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದರು, ಆದರೆ ಅವರನ್ನು ತರಗತಿ ಪ್ರವೇಶಿಸಲು ನಿರಾಕರಿಸಲಾಗಿದೆ.
