Connect with us

    DAKSHINA KANNADA

    ಉಪ್ಪಿನಂಗಡಿ: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗು ಸಾವು

    ಉಪ್ಪಿನಂಗಡಿ, ಜೂನ್ 20: ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ, ನಿವೃತ್ತ ಸೈನಿಕ ಸೈಜು ಎಂಬುವರ ಪುತ್ರಿ ಮೃತಪಟ್ಟ ಮಗುವಾಗಿದೆ.

    ಜೂ.19 ರಂದು ಬೆಳಗ್ಗೆ ಮಗುವಿನ ತಂದೆ, ತಾಯಿ ಮನೆಯಲ್ಲಿ ಪಿವಿಎಸ್ ಪೈಪ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿದ್ದು, ಇದರಲ್ಲಿ ಎರಡು-ಮೂರು ತಿಂಗಳುಗಳ ಹಿಂದೆ ತಂದಿಟ್ಟಿದ್ದ ಇಲಿ ಪಾಷಾಣದ ಟ್ಯೂಬ್ ಸಹ ಇತ್ತು ಎನ್ನಲಾಗ್ತಿದೆ. ಮನೆಯವರು ಕೆಲಸ ಮಾಡುತ್ತಿರುವಾಗ ಮಗು ಆಟವಾಡುತ್ತ ಬಂದು ಇಲಿ ಪಾಷಾಣವನ್ನು ತಿಂದಿದೆ ಎಂದು ಹೇಳಲಾಗುತ್ತಿದೆ.

    ಮಧ್ಯಾಹ್ನದ ವೇಳೆಗಾಗಲೇ ಮಗುವಿಗೆ ವಾಂತಿ ಆರಂಭಗೊಂಡಿದ್ದು, ತಕ್ಷಣವೇ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹಿನ್ನೆಲೆ, ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ವೇಳೆ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *