DAKSHINA KANNADA
ಉಪ್ಪಿನಂಗಡಿ – ನಿರ್ಮಾಣ ಹಂತದ ಕಟ್ಟದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ
ಉಪ್ಪಿನಂಗಡಿ ಡಿಸೆಂಬರ್ 04: ನಿರ್ಮಾಣ ಹಂತದ ಕಟ್ಟಡದೊಳಗೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪೇಟೆಯ ಮಧ್ಯೆ ಇರುವ ನಿರ್ಮಾಣ ಹಂತದಲ್ಲಿ ಈ ಮೃತದೇಹ ಪತ್ತೆಯಾಗಿದ್ದು, ಹೊರ ರಾಜ್ಯದ ಕಾರ್ಮಿಕರು ಪರಸ್ಪರ ಗಲಾಟೆ ಮಾಡಿ ಕೊಂದಿರುವ ಸಾಧ್ಯತೆಯಿದೆ.
ಸುಮಾರು 45 ವರ್ಷ ಪ್ರಾಯದ ಹಿಂದಿ ಮೂಲದ ಅಪರಿಚಿತ ವ್ಯಕ್ತಿಯನ್ನು ತಲೆಗೆ ಕಲ್ಲು ಅಥವಾ ಇನ್ನಿತರ ಸಲಕರಣೆಗಳಿಂದ ಹೊಡೆದು ಕೊಲೆಗೈದಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಅರ್ಧ ಕಂಬಳಿ ಹೊದಿಸಿ ಮಲಗಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸ್ವಲ್ಪ ದೂರದಲ್ಲಿ ಮೊಬೈಲ್ ಫೋನೊಂದು ಕಂಡುಬಂದಿದ್ದು, ಅದರ ಸಿಮ್ ಅನ್ನು ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.