DAKSHINA KANNADA
ಉಪ್ಪಿನಂಗಡಿ: ಟಯರ್ ರಿಸೋಲ್ ಮಾಡುವಾಗ ಕಂಪ್ರೇಸರ್ ಸ್ಪೋಟ- ಓರ್ವ ಸಾವು

ಉಪ್ಪಿನಂಗಡಿ, ಜನವರಿ 18: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಗಾಂಧಿ ಪಾರ್ಕ್ ನಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಆಲಂಕಾರು ಮೂಲದ ರಾಜೇಶ್ ಪೂಜಾರಿ (43) ಮೃತಪಟ್ಟಿದ್ದಾರೆ.

ಟಯರ್ ರಿಸೋಲ್ ಮಾಡಿತ್ತಿರುವ ಸಂದರ್ಭದಲ್ಲಿ ಏರ್ ಕಂಪ್ರೆಸರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ರಾಜೇಶ್ ರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಸಾವನ್ನಪ್ಪಿದ್ದರು. ಸ್ಥಳಕ್ಕೆ ಉಪ್ಪಿನಂಗಡಿ ಪೋಲೋಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ