LATEST NEWS
ಉಡುಪಿಯ ಯುಪಿಸಿಎಲ್ ಗೆ 52 ಕೋಟಿ ರೂಪಾಯಿ ದಂಡ – ರಾಷ್ಟ್ರೀಯ ಹಸಿರು ಪೀಠದಿಂದ ಆದೇಶ
ಉಡುಪಿ ಜೂನ್ 02: ಉಡುಪಿಯಲ್ಲಿರುವ ಯುಪಿಸಿಎಲ್ ಪವರ್ ಪ್ಲಾಂಟ್ ಗೆ 52.02 ಕೋಟಿ ರೂಪಾಯಿ ದಂಡವನ್ನು ಪಾವತಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶಿಸಿದೆ.
ಪವರ್ ಪ್ಲಾಂಟ್ ನಿಂದ ಸುತ್ತಮುತ್ತಲ ಪರಿಸರಕ್ಕೆ ಉಂಟಾದ ಹಾನಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳ ಆರೋಗ್ಯದ ಮೇಲಾಗುವ ಹಾನಿಯನ್ನು ಸರಿದೂಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ನ್ಯಾಯಮೂರ್ತಿ ಕೆ ರಾಮಕೃಷ್ಣನ್ ನೇತೃತ್ವದ ಎನ್‌ಜಿಟಿಯ ದಕ್ಷಿಣ ವಲಯದ ಪೀಠವು ಮೇ 31 ರಂದು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಮೂಲ ಅರ್ಜಿಯನ್ನು ಈ ಆದೇಶದೊಂದಿಗೆ ವಿಲೇವಾರಿ ಮಾಡಿತು. 50 ರಷ್ಟು ಪರಿಹಾರವನ್ನು “ಅಗತ್ಯ ಪರಿಸರ ಮೂಲಸೌಕರ್ಯ ಸುಧಾರಣೆ ನೀರು ಸರಬರಾಜು, ಒಳಚರಂಡಿ, ಎಸ್‌ಟಿಪಿ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಸೌಲಭ್ಯ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒದಗಿಸಲು ಯೋಜನೆಯನ್ನು ರೂಪಿಸಲು” ಬಳಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಧ್ಯಂತರ ಆದೇಶದ ಪ್ರಕಾರ ಯುಪಿಸಿಎಲ್ ಈಗಾಗಲೇ 5 ಕೋಟಿ ರೂ.ಗಳನ್ನು ಠೇವಣಿ ಇರಿಸಿರುವುದನ್ನು ಗಮನಿಸಿದ ಎನ್‌ಜಿಟಿ, ಉಳಿದ ಮೊತ್ತವನ್ನು ಮುಂದಿನ ಮೂರು ತಿಂಗಳೊಳಗೆ ಪಾವತಿಸಬೇಕು ಎಂದು ಹೇಳಿದೆ. ಯುಪಿಸಿಎಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಥವಾ ಆನ್‌ಲೈನ್ ನಿರಂತರ ಎಮಿಷನ್ ಮಾನಿಟರಿಂಗ್ ಸಿಸ್ಟಮ್ ಅನ್ನು ತಿದ್ದಿದ್ದಕ್ಕಾಗಿ ಹೆಚ್ಚುವರಿ ಪರಿಹಾರವನ್ನು ವಿಧಿಸಲು ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ (ಕೆಎಸ್‌ಪಿಸಿಬಿ ಮತ್ತು ಸಿಪಿಸಿಬಿ) ನ್ಯಾಯಮಂಡಳಿ ನಿರ್ದೇಶನ ನೀಡಿದೆ. ಸಮುದ್ರ ಪರಿಸರವನ್ನು ರಕ್ಷಿಸಲು ಶೂನ್ಯ-ದ್ರವ ವಿಸರ್ಜನೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಎರಡು ಮಂಡಳಿಗಳು UPCL ಗೆ ನಿರ್ದೇಶಿಸಬಹುದು ಎಂದು ಹೇಳಿದೆ.