FILM
ಬಿಗ್ ಬಾಸ್ ಓಟಿಟಿ ಶೋ ಮಾಜಿ ಸ್ಪರ್ಧಿ ಮುಖಕ್ಕೆ ಏನಾಗಿದೆ…!!

ಮುಂಬೈ ಜುಲೈ 22: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫ್ಯಾಷನ್ ಪೋಟೋಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಹಿಂದಿ ಬಿಗ್ ಬಾಸ್ ಓಟಿಟಿಯ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ನ ಇದೀಗ ತಮ್ಮ ಮುಖದಿಂದ ಮತ್ತೆ ವೈರಲ್ ಆಗಿದ್ದಾರೆ.
ಫ್ಯಾಷನ್ ಲೋಕದಲ್ಲಿ ಚಿತ್ರ-ವಿಚಿತ್ರ ಪ್ರಯೋಗಳನ್ನು ಮಾಡುವಲ್ಲಿ ಅವರು ಫೇಮಸ್ ಆಗಿರುವ ನಟಿ ಮಾಡೆಲ್ ಉರ್ಫಿ ಜಾವೇದ್ ಇದೀಗ ತಮ್ಮ ಮುಖದ ಅಂದವನ್ನು ಕೆಡಿಸಿಕೊಂಡಿದ್ದಾರೆ.
ಉರ್ಫಿ ಜಾವೇದ್ ಮೊದಲು ತಮ್ಮ ತುಟಿಗಳಿಗೆ ಫಿಲ್ಲರ್ ಗಳನ್ನು ಮಾಡಿಸಿಕೊಂಡಿದ್ದರು. ಆದರೆ ಅದು ಸರಿಯಾಗಿ ಬರದ ಕಾರಣ ಇದೀಗ ಅದನ್ನು ತೆಗೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದ ಕಾರಣ ಇದೀಗ ಉರ್ಫಿ ಜಾವೇದ್ ಮುಖ ಸಂಪೂರ್ಣ ಬದಲಾಗಿದೆ ಹೋಗಿದೆ.

ಆರಂಭದಲ್ಲಿ ತುಟಿಗಳು ಮಾತ್ರ ಊದಿಕೊಂಡಿದ್ದವು. ಅದರ ವಿಡಿಯೋವನ್ನು ಉರ್ಫಿ ಜಾವೇದ್ ಅವರು ಹಂಚಿಕೊಂಡಿದ್ದರು. ಆದರೆ ನಂತರ ಅವರ ಸಂಪೂರ್ಣ ಮುಖ ದಪ್ಪ ಆಗಿದೆ. ಇದು ಉರ್ಫಿ ಜಾವೇದ್ ಹೌದೋ ಅಲ್ಲವೋ ಎಂದು ಅನುಮಾನ ಮೂಡುವಷ್ಟು ದಪ್ಪ ಆಗಿದೆ. ವೈರಲ್ ಆಗಿರುವ ಈ ವಿಡಿಯೋಗೆ ಜನರು ಕಮೆಂಟ್ ಮಾಡುತ್ತಿದ್ದಾರೆ.
ತುಟಿ ಮತ್ತು ಬಹುಪಾಲು ಮುಖ ಊದಿಕೊಂಡಿದ್ದರಿಂದ ಉರ್ಫಿ ಜಾವೇದ್ ಅವರಿಗೆ ಮಾತನಾಡಲು ಕೂಡ ಕಷ್ಟ ಆಗುತ್ತಿದೆ. ಆದರೆ ಅವರು ಹೆಚ್ಚು ಚಿಂತೆ ಮಾಡುತ್ತಿಲ್ಲ. ತಮಗೆ ಬಂದಿರುವ ಈ ಪರಿಸ್ಥಿತಿಯಲ್ಲಿ ಕೂಡ ಅವರು ತಮಾಷೆ ಮಾಡುತ್ತಿದ್ದಾರೆ. ಬೇರೆಯವರಾಗಿದ್ದರೆ ಇಂಥ ವಿಡಿಯೋವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಆದಷ್ಟು ಬೇಗ ತಾನು ಮೊದಲಿನಂತೆ ಆಗುತ್ತೇನೆ ಎಂಬ ಭರವಸೆ ಅವರಿಗೆ ಇದೆ.