Connect with us

LATEST NEWS

ಹಾರ್ಟ್ ಅಟ್ಯಾಕ್ – ಕೊರೊನಾ ಸೊಂಕಿಗೆ ಒಳಗಾದವರು 2 ವರ್ಷ ಯಾವುದೇ ವ್ಯಾಯಾಮ, ಕಠಿಣ ಕೆಲಸ ಮಾಡಬೇಡಿ – ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ನವದೆಹಲಿ ಅಕ್ಟೋಬರ್ 30: ಇತ್ತೀಚೆಗೆ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಇದೀಗ ಕೇಂದ್ರ ಆರೋಗ್ಯ ಸಚಿವ ಮುನ್ಸುಖ ಮಾಂಡವಿಯಾ ಅವರು ಹೇಳಿಕೆಯೊಂದನ್ನು ನೀಡಿದ್ದು, ತೀವ್ರತರನಾದ ಕೋವಿಡ್ ರೋಗಕ್ಕೆ ತುತ್ತಾದವರು ವ್ಯಾಯಾಮ ಸೇರಿದಂತೆ ಯಾವುದೇ ರೀತಿಯ ಕಠಿಣ ಕೆಲಸವನ್ನು 2 ವರ್ಷ ಮಾಡಬಾರದೆಂದು ಹೇಳಿದ್ದಾರೆ.


ನವರಾತ್ರಿ ಹಬ್ಬದ ಆಚರಣೆ ವೇಳೆ ಗರ್ಬಾ ನೃತ್ಯದಲ್ಲಿ ತೊಡಗಿದ್ದಾಗ 10 ಮಂದಿ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತೀವ್ರವಾಗಿ ಕಾಡಿದ್ದ ಕೋವಿಡ್-19ನ (COVID-19) ಪ್ರಭಾವ ಕಡಿಮೆಯಾಗಿ ಇನ್ನೂ ಸಾಕಷ್ಟು ನಮಯ ಕಳೆದಿಲ್ಲ. ಹೀಗಿರುವಾಗ ನಾವು ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ ICMR ನಡೆಸಿದ ಅಧ್ಯಯನದ ಪ್ರಕಾರ, ತೀವ್ರವಾದ ಕೋವಿಡ್ ಹೊಂದಿರುವ ಜನರು ಕಠಿಣ ಪರಿಶ್ರಮ, ಓಟ ಅಥವಾ ಅತಿಯಾದ ವ್ಯಾಯಾಮವನ್ನು ತಪ್ಪಿಸಬೇಕು ಎಂದು ಹೇಳಿದರು.


ಆರೋಗ್ಯ ಸಚಿವರು, “ಐಸಿಎಂಆರ್ ಇತ್ತೀಚೆಗೆ ಅಧ್ಯಯನ ನಡೆಸಿದೆ. ಇದರಲ್ಲಿ ತೀವ್ರವಾದ ಕೋವಿಡ್ ಮತ್ತು ಸಾಕಷ್ಟು ಸಮಯ ಕಳೆದಿಲ್ಲ ಎಂದು ಹೇಳಲಾಗುತ್ತದೆ, ಅವರು ಹೃದಯಾಘಾತವನ್ನು ತಪ್ಪಿಸಲು ಕನಿಷ್ಠ ಒಂದು ಅಥವಾ ಎರಡು ವರ್ಷಗಳ ಕಾಲ ಅತಿಯಾದ ವ್ಯಾಯಾಮ, ಓಟ ಅಥವಾ ಕಠಿಣ ಪರಿಶ್ರಮದಿಂದ ದೂರವಿರಬೇಕು. ಐಸಿಎಂಆರ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್‌ ಸಂತ್ರಸ್ತರು ಹೃದಯಾಘಾತವನ್ನು ತಪ್ಪಿಸಲು ಕನಿಷ್ಠ ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ಅತಿಯಾದ ಆಯಾಸವಾಗುವಂತಹ ಕೆಲಸ, ಓಟ ಹಾಗೂ ಕಠಿಣ ವ್ಯಾಯಾಮದಲ್ಲಿ ತೊಡಗದಂತೆ ಉಲ್ಲೇಖಿಸಿದೆ. ಈ ಕಾರಣದಿಂದಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಸಮಸ್ಯೆಯಿಂದ ಬಳಲಿ ಗುಣಮುಖರಾದವರು ಈ ಬಗ್ಗೆ ಮತ್ತಷ್ಟು ಜಾಗ್ರತೆ ವಹಿಸಬೇಕು. ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ಮಾರ್ಗ ಎಂದು ಅವರು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *