DAKSHINA KANNADA
ಭೂಗತ ಪಾತಕಿ ಶಿಷ್ಯನ ಆಟಾಟೋಪ…ಬರ್ತಡೇ ಪಾರ್ಟಿ ಮಾಡ್ತಿದ್ದವರ ಮೇಲೆ ಲಾಂಗ್ ಹಿಡಿದು ದಾಳಿ

ಪುತ್ತೂರು ಜೂನ್ 10: ಪುತ್ತೂರಿನಲ್ಲಿ ಮತ್ತೆ ಭೂಗತ ಪಾತಕಿಗಳ ಹೆಸರಿನಲ್ಲಿ ಪು಼ಡಿ ರೌಡಿಗಳ ಅಟ್ಟಹಾಸ ಪ್ರಾರಂಭವಾಗಿದ್ದು, ಬರ್ತ್ ಡೇ ಪಾರ್ಟಿ ಮಾಡುತ್ತಿದ್ದವರ ಮೇಲೆ ರೌಡಿಯೊಬ್ಬ ಲಾಂಗ್ ಹಿಡಿದು ದಾಳಿ ನಡೆಸಿದ ಘಟನೆ ಪುತ್ತೂರಿನ ದರ್ಬೆ ಬಳಿ ನಡೆದಿದೆ.
ತಲವಾರ್ ದಾಳಿ ನಡೆಸಿದವನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈತ ಬರ್ತಡೇ ಪಾರ್ಟಿ ನಡೆಯುತ್ತಿದ್ದ ಕಟ್ಟಡದೊಳಗೆ ತಲವಾರ್ ಹಿಡಿದುಕೊಂಡು ನುಗ್ಗಿದ್ದಾನೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಸ್ಟೇರ್ ಕೇಸ್ ನಿಂದ ಬಿದ್ದು ಯುವಕನಿಗೆ ಗಾಯಗಳಾಗಿದೆ.

ಇಡೀ ಘಟನೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈತ ಭೂಗತಲೋಕದ ಡಾನ್ ಗಳ ಹೆಸರಿನಲ್ಲಿ ಆಟಾಟೋಪ ಮಾಡುತ್ತಿದ್ದಾನೆ ಎಂದು ಹೇಳಲಾಗಿದ್ದು, ವಿದೇಶದಿಂದ ಬಂದ ಸೂಚನೆ ಮೇರೆಗೆ ಈ ದಾಳಿ ಮಾಡಿರುವ ಸಾಧ್ಯತೆ ಇದೆ. ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.