LATEST NEWS
‘ಉಂದು ‘ಸಂತೆಕಟ್ಟೆ’ ಅತ್ತ್, ಅಧಿಕಾರಿ ಜನಪ್ರತಿನಿಧಿನಕ್ಲೆನ ‘ತಿಗಲ್ದಕಟ್ಟಾ’..!!!!

ಉಡುಪಿ: ಉಡುಪಿ ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿ ದಶಕ ಕಳೆದಿದೆ. ಆದ್ರೆ ಇಲ್ಲಿ ಎಷ್ಟೊಂದು ಸಮಸ್ಯೆ ಎದುರಾಗಿದೆ ಅಂದ್ರೆ ಸಂಚರಿಸುವವರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತೆಕಟ್ಟೆಯ ಅಂಡರ್ಪಾಸ್ ಕಾಮಗಾರಿಯ ಅವ್ಯವಸ್ಥೆಯಿಂದ ನಿತ್ಯ ವಾಹನ ಸವಾರರು ಪರದಾಟ ಮಾಡುತ್ತಿದ್ದರೆ , ನಡೆದಾಡುವವರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಆರಂಭವಾಗಿ 10 ವರ್ಷ ಕಳೆದಿದೆ. ರಸ್ತೆ ನಿರ್ಮಿಸುವವರಿಗೂ, ಜಿಲ್ಲಾಡಳಿತಕ್ಕೂ ಸವಾಲಾಗಿಯೇ ಇದು ಉಳಿದಿದೆ.

ಈ ಮಧ್ಯೆ ಸಂತೆಕಟ್ಟೆ ರಸ್ತೆಯ ಕುರಿತು ಸುಂದರ , ಮಾರ್ಮಿಕ ತುಳು ಹಾಡು ರಚನೆಯಾಗಿದ್ದು ವೈರಲ್ ಆಗಿದೆ. ಕಟಪಾಡಿ ನಿವಾಸಿ ಮದನ್ ಮಣಿಪಾಲ್ ಎಂಬವರು ಈ ಹಿಂದೆ ಕಟಪಾಡಿ ಶಿರ್ವ ರಸ್ತೆ ಅವ್ಯವಸ್ಥೆ ಬಗ್ಗೆ ಹಾಡು ರಚಿಸಿದ್ದು, ಅದು ಭಾರಿ ವೈರಲ್ ಆಗಿತ್ತು. ಬಳಿಕ ಆ ರಸ್ತೆ ರಿಪೇರಿಯನ್ನೂ ಕಂಡಿತ್ತು. ನಂತರದ ದಿನಗಳಲ್ಲಿ ಸಾರ್ವಜನಿಕರು ಉಡುಪಿಯ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ಹಾಡು ರಚನೆ ಮಾಡುವಂತೆ ವಿನಂತಿ ಮಾಡುತ್ತಲೇ ಇದ್ದರು. ಇದೀಗ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ತಾವೇ ಹಾಡು ರಚಿಸಿ ಹಾಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.