DAKSHINA KANNADA
ಉಳ್ಳಾಲ: ನಿಷೇದಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಇಬ್ಬರು ಅಂದರ್
ಉಳ್ಳಾಲ, ಡಿಸೆಂಬರ್ 05: ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತುವಾದ ಮೆತಫಿಟಮೈನ್ ಮತ್ತು ಎಲ್‌ಎಸ್‌ಡಿ ಸ್ಟ್ಯಾಂಪ್ ಡ್ರಗ್ಸ್ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆ ಬದಿಯಲ್ಲಿ ಕೆಎ-19-ಎಂಎಂ-7082 ನೇ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಆರೋಪಿಗಳಾದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ರವರು ನಿಷೇದಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿರುವುದನ್ನು ಪತ್ತೆ ಮಾಡಿದ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ವಶದಿಂದ 132 ಗ್ರಾಂ ತೂಕದ ಮೆಥಾಂಫೆಟಮೈನ್ (Methamphetamine) ಮತ್ತು 250 LSD ಸ್ಟ್ಯಾಂಪ್ ಹಾಗು ನಗದು ಹಣ ರೂ.3,70,050/- ಹಾಗೂ ಸ್ವಿಪ್ಟ್ ಕಾರು ಹೀಗೇ ಒಟ್ಟು ರೂ.14,01,050-00 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ದಾಳಿಯಲ್ಲಿ ಶ್ರೀಮತಿ ಧನ್ಯ.ಎನ್.ನಾಯಕ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗರವರ ನೇತೃತ್ವದಲ್ಲಿ Anti-Drug Team ಪಿಎಸ್‍ಐ ಪುನಿತ್ ಗಾಂವ್‍ಕರ್, ಉಳ್ಳಾಲ ಠಾಣಾ ಪಿಎಸ್‍ಐ, ಸಂತೋಷಕುಮಾರ್.ಡಿ. ಹಾಗೂ ಸಿಬ್ಬಂದಿಗಳಾದ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಯಡ್ರಾಮಿ ರವರು ಭಾಗವಹಿಸಿರುತ್ತಾರೆ.