Connect with us

DAKSHINA KANNADA

ಉಳ್ಳಾಲ : ಮೃತ್ಯು ಕೂಪವಾಗುತ್ತಿದೆ ಕಲ್ಲಾಪು, ಕಾರುಗಳ ಧಾವಂತಕ್ಕೆ ಮತ್ತೋರ್ವ ವೃದ್ದೆ ಬಲಿ..!

ಉಳ್ಳಾಲ, ಡಿಸೆಂಬರ್ 09 :  ಕಾರುಗಳ ಮೇಲಾಟಕ್ಕೆ  ಪಾದಚಾರಿ ವೃದ್ದೆಯೊಬ್ಬರು ಬಲಿಯಾದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ರಾಷ್ಟ್ರೀಯ ಹೆದ್ದಾರಿ 66  ಆಡಂಕುದ್ರು ಬಳಿ ಸೋಮವಾರ ಸಂಜೆ ನಡೆದಿದ್ದು ಕಲ್ಲಾಪು, ಆಡಂಕುದ್ರು ಪ್ರದೇಶ ಮೃತ್ಯು ಕೂಪವಾಗಿ  ಮಾರ್ಪಟ್ಟಿದೆ.

ವೃದ್ದ ಮಹಿಳೆ  ಸ್ಥಳದಲ್ಲೇ  ಪ್ರಾಣ ಕಳಕೊಂಡರೆ, ಕಾರುಗಳು ಆಳವಾದ ಕಮರಿಗೆ ಉರುಳಿ ಬಿದ್ದಿವೆ. ಉಳ್ಳಾಲ ತೊಕ್ಕೊಟ್ಟು ಚೆಂಬುಗುಡ್ಡೆ ಸೇವಂತಿ ಗುಡ್ಡೆ ನಿವಾಸಿ ಬೇಬಿ (65) ಮೃತ ದುರ್ದೈವಿಯಾಗಿದ್ದಾರೆ. ಅಡಂಕುದ್ರು ಶಾಲೆಯ ಮುಂದೆ ಪುಟ್ಟ ಅಂಗಡಿ ನಡೆಸುತ್ತಿದ್ದ ಬೇಬಿ ಅವರು ಅಂಗಡಿ ಕೆಲಸದ ಬಳಿಕ ದಿನವೂ ಕಂಕನಾಡಿ ಪಂಪ್ ವೆಲ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದರು. ಸೋಮವಾರ ಸಂಜೆ ಎಂದಿನಂತೆ ಬೇಬಿ ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದು ಅಡಂಕುದ್ರು ಬಳಿ ಬಸ್ಸು ಹತ್ತಲು ಹೆದ್ದಾರಿ ದಾಟುತಿದ್ದಾಗ ಈ ದುರ್ಘಟನೆ ಸಂಭವಿಸಿದೆ.  ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಕಡೆ ವೇಗವಾಗಿ ಹೋಗುತ್ತಿದ್ದ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ . ಪರಿಣಾಮ ಬೇಬಿ  ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ. ಮಹಿಳೆಯ ಡಿಕ್ಕಿ ಹೊಡೆದ  ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ. ಇದರ ಬೆನ್ನಲ್ಲೇ ಪೋಲೋ ಕಾರನ್ನ ಓವರ್ ಟೇಕ್ ಮಾಡುತ್ತಿದ್ದ ಮತ್ತೊಂದು ಕಾರು ಕೂಡ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೊದೆಗೆ ಬಿದ್ದಿದ್ದು ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಮೃತ್ಯು  ಕೂಪವಾಗುತ್ತಿದೆ ಕಲ್ಲಾಪು:

ಅಡಂಕುದ್ರು, ಕಲ್ಲಾಪು ಪ್ರದೇಶಗಳು ಇದೀಗ ಮೃತ್ಯು ಕೂಪಗಳಾಗುತ್ತಿದ್ದು ಹೆದ್ದಾರಿಯ ಅವೈಜ್ಞಾನಿಕ ಕಾಮಾಗಾರಿ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಅನೇಕ ಅಪಘಾತಗಳು ನಡೆದಿದ್ದು ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಪ್ರಮುಖವಾಗಿ ರಾಷ್ಟ್ರೀ ಹೆದ್ದಾರಿ ಕೂಡ ಇದೇ ಆಗಿದೆ. ಪ್ರತ್ಯೇಕ ಸರ್ವಿಸ್ ರಸ್ತೆ, ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಇಲ್ಲಿ ಇಲ್ಲದ ಕಾರಣ  ಬಸ್ ಹತ್ತಲು ರಸ್ತೆ ದಾಟುವವರು ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದಲ್ಲಿ ಸಾಗುವ ವಾಹನಗಳಿಗೆ ಬಲಿಯಾಗುತ್ತಿದ್ದಾರೆ. ದ್ವಿ ಚಕ್ರ ವಾಹನ ಸವಾರರು , ಆಟೋಗಳು ಏಕ ಮುಖ ಸಂಚಾರದ ರಸ್ತೆಯಲ್ಲಿ ವಿರುದ್ದ  ಧಿಕ್ಕಿನಿಂದ ಸಾಗುತ್ತಿರುವುದು ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಮತ್ತು ಸ್ಥಳಿಯ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *