LATEST NEWS
ಉಳ್ಳಾಲ – ಮೀನು ಸಾಗಾಟದ ಟೆಂಪೋ ಪಲ್ಟಿ

ಮಂಗಳೂರು ಫೆಬ್ರವರಿ 05: ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಟೆಂಪೋ ಒಂದು ಪಲ್ಟಿಯಾದ ಘಟನೆ ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಸಾದಿಕ್ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ಮಂಗಳೂರು ಧಕ್ಕೆಯಿಂದ ಉಳ್ಳಾಲ ಫಿಷ್ ಮಿಲ್ ಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ, ಚಾಲಕನ ನಿಯಂತ್ರಣ ತಪ್ಪಿ ವಾಲಿದ್ದು, ಈ ವೇಳೆ ಟಯರ್ ಸಿಡಿದು ರಸ್ತೆಗೆ ಉರುಳಿದೆ.
ಘಟನೆಯಿಂದ ರಸ್ತೆಯಲ್ಲಿ ಮೀನು ಚಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿತ್ತು.
