BELTHANGADI
ಬೆಳ್ತಂಗಡಿಯಲ್ಲಿ ಸರ್ವಧರ್ಮದ ‘ಉಲಾಯಿ – ಪಿದಾಯಿ’ ಜೂಜಿನಾಟ, 23 ಜನ ‘ಉಲಾಯಿ’…!!!?
ಬೆಳ್ತಂಗಡಿ : ಕರಾವಳಿಯಲ್ಲಿ ಎಲ್ಲಾ ವಿಷಯಕ್ಕೂ ಕೋಮು ಬಣ್ಣ ಹಚ್ಚುವುದು ಮಾಮೂಲಿಯಾದ್ರೆ ಅನೈತಿಕ ಚಟುವಟಿಕೆ, ಜೂಜಾಟಗಳಲ್ಲಿ ಮಾತ್ರ ಸರ್ವ ಧರ್ಮ ಪಾಲನೆಯಾಗುತ್ತಿರುವುದು ವಿಶೇಷ. ಇಂತಹುದೆ ಸರ್ವ ಧರ್ಮದ ಜನ ಸೇರಿಕೊಂಡು ಜೂಜಾಟ(gambling) ನಡೆಸುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಜೂಜಾಟದಲ್ಲಿ ನಿರತರಾಗಿದ್ದ ಹಿಂದೂ, ಕ್ರೈಸ್ರ , ಮುಸ್ಲೀಂ ಧರ್ಮದ 20 ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣ ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಹಾರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಕಟ್ಟಡದ ಹಿಂಭಾಗದಲ್ಲಿಈ ಅದೃಷ್ಟದಾಟ ನಡೆಯುತ್ತಿತ್ತು. ಈ ಕೃತ್ಯದಲ್ಲಿ ತೊಡಗಿದ್ದ ಪೆರ್ನೆ,ಬಜತ್ತೂರು ನಿವಾಸಿಗಳ ಸಹಿತ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಠಾಣಾ ಪಿಎಸ್‌ಐ ನಂದಕುಮಾರ್ ಎಂ.ಎಂ ನೇತೃತ್ವದ ಪೊಲೀಸರು ದಾಳಿ ನಡೆಸಿ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36. 729/- ಆಗಬಹುದು.ಆರೋಪಿಗಳನ್ನು ಮೊನಪ್ಪ ಪೂಜಾರಿ, ಅಬ್ದುಲ್ ಖಾದರ್, ಮೊಹಮ್ಮದ್ ಹೈದರ್, ಜೋಸ್ ತೋಮಸ್, ಅಬೂಬಕ್ಕರ್, ಲೋಕನಾಥ ಬಂಗೇರ ತುಕರಾಮ್, ಅಬ್ದುಲ್ ರಹಿಮಾನ್, ಯಶೋಧರ, ರಮೇಶ್ ಆಚಾರ್ಯ, ಜಿ.ಎ.ದಾವೂದ್, ರಿಯಾಜ್ ಮೊಹಮ್ಮದ್, ಅಬೂಬಕ್ಕರ್ ಅಬ್ದುಲ್ ರವೂಫ್, ಮುಸ್ತಾಫ, ಎಂ.ಅಶ್ರಫ್, ರಮೇಶ್.ಕೆ, ಅಬ್ದುಲ್ ರಝಾಕ್, ಕಮಲಾಕ್ಷ ದಾಸ್, ವಿಜಯ ಕುಮಾರ್, ಮಜೀದ್ ಯಾನೆ ಅಬ್ದುಲ್ ಮಜೀದ್, ಶ್ರೀಧರ ಪೂಜಾರಿ, ಮುಸ್ತಾಫ, ಎಂದು ಗುರುತಿಸಲಾಗಿದೆ.