Connect with us

    LATEST NEWS

    ಉಡುಪಿ : ಪತಿಗೆ ಕೊರೊನಾ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪತ್ನಿ…!!

    ಉಡುಪಿ,ಜೂ.5: ಪತಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆ ಮನನೊಂದು ಮಹಿಳೆಯೊಬ್ಬರು ವಸತಿ ಸಂಕೀರ್ಣದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.


    ಮೃತರನ್ನು 70 ವರ್ಷ ಪ್ರಾಯದ ಗಂಗಮ್ಮ ಎಂದು ಗುರುತಿಸಲಾಗಿದೆ. ಇವರು ಮೂಲತಃ ಚಿತ್ರದುರ್ಗದವರು. ನಗರದ ಬಿಗ್ ಬಜಾರ್ ಸನಿಹದಲ್ಲಿರುವ ವಸತಿಸಂಕೀರ್ಣದಲ್ಲಿಯ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು.

    ಇವರ ಪತಿಯು ಕೊರೊನಾ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆಕೊಂಡಿರ ಬಹುದೆಂದು ಶಂಕಿಸಲಾಗಿದೆ.

    ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *