LATEST NEWS
ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 5ಕ್ಕೆ ಇಳಿಸಲು ಉಡುಪಿ ಜಲ್ಲಾಡಳಿತ ಬಿಗಿ ಕ್ರಮ – 33 ಗ್ರಾಮ ಸೀಲ್ ಡೌನ್
ಉಡುಪಿ ಜೂನ್ 2 : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 5ಕ್ಕೆ ಇಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ 165 ಗ್ರಾಮಗಳಲ್ಲಿ 33 ಗ್ರಾಮಗಳನ್ನು ಜೂನ್ 7 ರ ತನಕ ಸಂಪೂರ್ಣ ಸೀಲ್ ಡೌನ್ ಮಾಡಿದೆ.
ಉಡುಪಿ ಜಿಲ್ಲಾಧಿಕಾರಿ ಆದೇಶದಂತೆ 50ಕ್ಕಿಂತ ಅಧಿಕ ಕೊರೊನಾ ಪ್ರಕರಣಗಳಿರುವ ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಗ್ರಾಮದ ಗಡಿಗಳನ್ನು ಪೊಲೀಸ್ ಬ್ಯಾರಿಕೇಡ್ ಮೂಲಕ ಮುಚ್ಚಲಾಗಿದೆ.
ಸೀಲ್ ಡೌನ್ ಸಂದರ್ಭ ಕೇವಲ ಮೆಡಿಕಲ್ ಶಾಪ್, ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅನುಮತಿ ಪಡೆದ ಮನೆ ಮದುವೆಗೆ ಈ ಸಂದರ್ಭ ಅವಕಾಶ ಇದೆ.
ಜಿಲ್ಲೆಯ 165 ಗ್ರಾಮಗಳಲ್ಲಿ ಒಟ್ಟು 33 ಗ್ರಾಮಗಳು ಸಂಪೂರ್ಣ ಸೀಲ್ ಡೌನ್ ಆಗಲಿವೆ. ಈಗಾಗಲೇ ಗ್ರಾಮದ ಗಡಿಯಲ್ಲಿ ಬ್ಯಾರಿಕೇಡ್ ಅಳವಡಿಸಲು ಪೊಲೀಸರ ನಿಯೋಜಿಸಲಾಗಿದೆ. ಸದ್ಯ ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡ 19 ಇದ್ದು, ಅದನ್ನು ಶೇಕಡ 5ಕ್ಕೆ ಇಳಿಸಲು ಜಿಲ್ಲಾಡಳಿತ ಬಿಗಿ ಕ್ರಮಕೈಗೊಳ್ಳುತ್ತಿದೆ.