LATEST NEWS
ಫೆಬ್ರವರಿ 17ರಂದು ಕುಂಭಮೇಳಕ್ಕೆ ಉಡುಪಿಯಿಂದ ವಿಶೇಷ ರೈಲು-ಅಧಿಕೃತ ಪ್ರಕಟಣೆ…
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಉಡುಪಿ ಫೆಬ್ರವರಿ 13: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉಡುಪಿಯಿಂದ ವಿಶೇಷ ರೈಲು ಫೆಬ್ರವರಿ 17 ರಂದು ಹೊರಡಲಿದೆ. ಫೆಬ್ರವರಿ 14 ರಿಂದ ಈ ರೈಲಿನ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಜನರಿಗಾಗಿ ಕುಂಭಮೇಳಕ್ಕೆ ವಿಶೇಷ ರೈಲು ಒದಗಿಸುವಂತೆ ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಲ್ಲಿ ಮನವಿ ಮಾಡಿದ್ದು ಇದೀಗ ಅಧಿಕೃತ ಪ್ರಕಟಣೆಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ. ದಿನಾಂಕ ಫೆಬ್ರವರಿ 17ರಂದು ಮಧ್ಯಾಹ್ನ 12.30 ಗಂಟೆಗೆ ಉಡುಪಿಯಿಂದ ಹೊರಟು ಕುಂಭಮೇಳದತ್ತ ಪ್ರಯಾಣ ಬೆಳೆಸಲಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಯಾತ್ರಾರ್ಥಿಗಳಿಗೆ ಇದು ಬಹಳಷ್ಟು ಉಪಕಾರಿಯಾಗಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಕುಂಭಮೇಳಕ್ಕೆ ಹೋಗಿ ಬರಬಹುದು. ಈ ರೈಲು ಸೇವೆಯನ್ನು ಹೆಚ್ಚಿನ ಭಕ್ತಾದಿಗಳು ಉಪಯೋಗಿಸುವಂತೆ ಕೇಳಿಕೊಳ್ಳುತ್ತೇನೆ.
ನನ್ನ ಮನವಿಯನ್ನು ಪುರಸ್ಕರಿಸಿದ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ Ashwini Vaishnaw ರವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಫೆಬ್ರವರಿ.14ರಂದು ಬೆಳಿಗ್ಗೆಯಿಂದ ಟಿಕೆಟ್ ಲಭ್ಯವಿದ್ದು ರೈಲ್ವೆ ಇಲಾಖೆಯ ವೆಬ್‌ಸೈಟ್ ಅಥವಾ ಆಯಾ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ರೈಲು ಫೆಬ್ರವರಿ 17 ರಂದು ಉಡುಪಿಯಿಂದ ಹೊರಟು ಫೆಬ್ರವರಿ 19 ರಂದು ಪ್ರಯಾಗ್ ರಾಜ್ ತಲುಪಲಿದೆ. ಬಳಿಕ ಮತ್ತೆ ಫೆಬ್ರವರಿ 20 ರಂದು ಪ್ರಯಾಗ್ ರಾಜ್ ನಿಂದ ಹೊರಟು ಫೆಬ್ರವರಿ 22 ರಂದು ಉಡುಪಿಗೆ ಬರಲಿದೆ.
1 Comment