ಉಡುಪಿ, ಮೇ 12: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗುರುವಾರ ಮುಸಲ್ಮಾನರ ಹಬ್ಬ ರಂಜಾನ್ ನಡೆಯಲಿದೆ. ಮಹಾಮಾರಿ ಕೊರೊನಾದ ಜನತಾ ಲಾಕ್ಡೌನ್ ಇರುವ ಕಾರಣ ಈ ಬಾರಿ ಸಾಮೂಹಿಕವಾಗಿ ರಂಜಾನ್ ಆಚರಣೆಗೆ ಅವಕಾಶ ಇಲ್ಲ.
ಹಬ್ಬದ ಸಂದರ್ಭ ಕಾನೂನು-ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ಉಡುಪಿಯಲ್ಲಿ ಎರಡು ಕೆಎಸ್ ಆರ್ ಪಿ, 6 ಡಿಎ ಆರ್ 11 ಇನ್ಸ್ ಪೆಕ್ಟರ್, 50 ಸಬ್ ಇನ್ಸ್ ಪೆಕ್ಟರ್, 4 ಡಿವೈಎಸ್ ಪಿ, ಸಹಿತ ಹೆಚ್ಚುವರಿ ಭಧ್ರತೆ ಇರಲಿದೆ. ಹಬ್ಬದ ಹಿನ್ನೆಲೆಯಲ್ಲಿ ಮುಸಲ್ಮಾನರು ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಮಾಡಬಾರದು.
ಗುಂಪು ಸೇರಿ ಹಬ್ಬ ಆಚರಿಸಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ರಕ್ಷಣೆ, ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುತ್ತೇವೆ ಎಂದು ಎಸ್ಪಿ ವಿಷ್ಣುವರ್ಧನ ಮಾಹಿತಿ ನೀಡಿದರು.