LATEST NEWS
ಉಡುಪಿ: ಸೈಂಟ್ ಮೆರೀಸ್ ದ್ವೀಪದ ಬಳಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆ, ಮೂವರ ಬಂಧನ

ಉಡುಪಿ: ಮಲ್ಪೆಯ ಸೈಂಟ್ ಮೆರೀಸ್ ದ್ವೀಪ ಪ್ರದೇಶದ ಬಳಿ ಶಂಕಾಸ್ಪದವಾಗಿ ಸಂಚಾರ ಮಾಡುತ್ತಿದ್ದ ವಿದೇಶಿ ಬೋಟನ್ನು ಮಲ್ಪೆ ಸಿಎಸ್ ಪಿ ಠಾಣೆ ಸಿಬ್ಬಂದಿಗಳು ಮತ್ತು ಮಂಗಳೂರು ಕರಾವಳಿ ಕಾವಲು ಪೊಲೀಸ್ ಪಡೆ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರು ತಮಿಳುನಾಡು ಮೂಲದ ಜನರನ್ನು ಬಂಧಿಸಲಾಗಿದೆ.
ಬಂಧಿತರನ್ನು ತಮಿಳುನಾಡು ಮೂಲದ ಜೇಮ್ಸ್ ಫ್ರಾಂಕ್ಲಿನ್ (50), ರಾಬಿನ್ ಸ್ಟೈನ್ (50) ಮತ್ತು ಡಿರೋಸ್ ಅಲೋನೋ (38) ಎಂದು ಗುರುತಿಸಲಾಗಿದೆ. ಇವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಒಮನ್ ದೇಶದ ದುಕಮ್ ಮೀನುಗಾರಿಕಾ ಬಂದರಿನಿಂದ ಫೆ.17ರಂದು ಹೊರಟಿದ್ದ ಈ ಬೋಟ್, ಕಾರವಾರ ಮೂಲಕ ಸಾಗಿ ಮಲ್ಪೆ ಕಡೆಗೆ ಬಂದಿತ್ತು ತನಿಖಾಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಯಾವುದೇ ಸಂಶಯಾಸ್ಪದ ವಸ್ತುಗಳು ದೊರೆತಿಲ್ಲ ಎಂದು ವರದಿಯಾಗಿದೆ.