LATEST NEWS
ಮೃತದೇಹ ಎಸೆದು ಪರಾರಿ – ಕೊಲೆ ನಡೆದಿರುವ ಬಗ್ಗೆ ಸುಳಿವು ಇಲ್ಲ – ಎಸ್ಪಿ
ಉಡುಪಿ ಫೆಬ್ರವರಿ 18: ಕೆಲಸಕ್ಕೆ ಬಂದಿದ್ದ ಜೊತೆಗಾರನನ್ನು ರಸ್ತೆ ಬದೆ ಎಸೆದು ಹೋದ ಪ್ರಕರಣಕ್ಕೆ ಸಂಬಂಧಸಿದಂತೆ ಉಡುಪಿ ಜಿಲ್ಲಾ ಎಸ್ ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಪ್ರತಿಕ್ರಿಯೆ ನೀಡಿದ್ದು, ಇಂದೊಂದು ಕೊಲೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ಉಡುಪಿ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ನಿವಾಸಿ ಹನುಮಂತ (48) ಕುಡಿತದ ಚಟ ಹೊಂದಿದ್ದರು, ವಾರದ ಸಂತೆ ಹಿನ್ನಲೆ ಸಿರಗುಂದ ತಾಲೂಕಿನ ಬಸಿಯಾ ಹಾಗೂ ಚಾಲಕ ಬಳ್ಳಾರಿಯ ಮಂಜುನಾಥ ಕೆಮ್ಮಣ್ಣು ಸಂತೆ ಮಾರುಕಟ್ಟೆಗೆ ತರಕಾರಿ ತಂದು ಮಾರಾಟ ಮಾಡುತ್ತಿದ್ದರು. ಆದರೆ ರಿಕ್ಷಾ ಟೆಂಪೊದಲ್ಲಿ ಹನುಮಂತ ವಿಪರೀತ ಕುಡಿದು ಮಲಗಿದ್ದರು. ಏಳದ ಕಾರಣ ಹನುಮಂತ ಅವರನ್ನು ಟೆಂಪೋದಲ್ಲಿ ಹೊರಗಡೆ ಮಲಗುವ ಜಾಗದಲ್ಲಿ ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.
ಆದರೆ ವಿಪರೀತ ಕುಡಿದಿರುವುದರಿಂದ ಹನುಮಂತನ ದೇಹ ಅಲುಗಾಡುತ್ತಿರಲಿಲ್ಲ. ಅದನ್ನು ನೋಡಿ ಜನ, ಹನುಮಂತನನ್ನು ಸಾಯಿಸಿ ಎಸೆದು ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದರು ಎನ್ನುವ ಆರಂಭಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದ್ದು, ಇದೊಂದು ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದಿದ್ದಾರೆ.