LATEST NEWS
ಉಡುಪಿ: ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಶೋಭಾ ಕರಂದ್ಲಾಜೆ ಭೇಟಿ
ಉಡುಪಿ, ಜುಲೈ 11: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಕಡಲ್ಕೊರೆತಕ್ಕೆ ಕಾರಣವಾಗಿದೆ. ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ಕೂಡಲೇ ವರದಿಯನ್ನು ಸರ್ಕಾರಕ್ಕೆ ಕೊಡಿ ಎಂದರು. ಅಲ್ಲದೆ ಇದೇ ವೇಳೆ ಕೇಂದ್ರದ ಪರಿಹಾರ ಶೀಘ್ರ ಕೊಡಿಸುವ ಭರವಸೆ ನೀಡಿದರು. ಕಾಪು ಮೂಳೂರಿನಲ್ಲಿ ಸುಮಾರು ನೂರು ಮೀಟರ್ ಜಮೀನು ಸಮುದ್ರಕ್ಕಾಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಚಿವೆ ಇಂದು ಕಾಪು ತಾಲೂಕಿನ ಮುಳೂರು ಭಾಗಕ್ಕೆ ಭೇಟಿ ಕೊಟ್ಟರು. ಇದೇ ವೇಳೆ ಕಡಲ್ಕೊರೆತದಿಂದ ಜನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಲಿಸಿದ್ದಾರೆ.
ಉಚ್ಚಿಲ, ಬಟ್ಟಪಾಡಿ ಹಾಗೂ ಉಳ್ಳಾಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ದಡದಲ್ಲಿನ ತೆಂಗಿನ ಮರಗಳು ಧಾರಾಶಾಹಿಯಾಗುತ್ತಿವೆ. ಸದ್ಯ ರಸ್ತೆ ಸಂಪರ್ಕವೇ ಇಲ್ಲದೆ ಬಟ್ಟಪಾಡಿ ಗ್ರಾಮ ದ್ವೀಪದಂತಾಗಿದೆ. ರಸ್ತೆ ಸಂಪರ್ಕವಿಲ್ಲದೆ ಸುಮಾರು 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಡುತ್ತಿದ್ದಾರೆ. ಸಮುದ್ರ ಸಮೀಪದ ಮನೆಗಳಿಗೆ ಭಾರೀ ಗಾತ್ರದ ಅಲೆಗಳು ಬಡಿಯುತ್ತಿವೆ.