Connect with us

    DAKSHINA KANNADA

    ಉಡುಪಿ : ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ಡಾ. ಲಾರೆನ್ಸ್ ಡಿಸೋಜ ದೈವಾಧೀನ..!

    ಉಡುಪಿ : ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ವಂದನೀಯ ಡಾ. ಸಿ. ಲಾರೆನ್ಸ್ ಡಿಸೋಜ (75)  ಮಂಗಳವಾರ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ.

    1948 ನವೆಂಬರ್ 28ರಂದು ಉಡುಪಿಯ ಶಿರ್ವ ಸಮೀಪದ ಪೆರ್ನಾಲ್ ನಲ್ಲಿ ಜನಿಸಿದ ಅವರು 1977 ರಲ್ಲಿ ಧರ್ಮಗುರುವಾಗಿ ಯಾಜಕ ದೀಕ್ಷೆಯನ್ನು ಪಡೆದರು. 1977-79 ರ ವರೆಗೆ ಕುಲಶೇಖರ ಚರ್ಚಿನ ಸಹಾಯಕ ಧರ್ಮಗುರುಗಳಾಗಿ, 1979-84 ರ ತನಕ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿ ಸಹಾಯಕ ನಿರ್ದೇಶಕರಾಗಿ, 1984-92 ರ ವರೆಗೆ ಮಂಗಳೂರು ಧರ್ಮಪ್ರಾಂತ್ಯ ಕಥೊಲಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿ, 1998-2006 ರ ವರೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ, 2006-2008 ರ ವರೆಗೆ ಕುಲಶೇಖರ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ , 2008-2014 ರ ವರೆಗೆ ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯ ನಿರ್ದೇಶಕರಾಗಿ, 2015-18 ರ ವರೆಗೆ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿಯಾಗಿ, 2018-2020 ರ ವರೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.ನಾಲ್ಕು ದಶಕಗಳ ಸುದೀರ್ಘ ಧಾರ್ಮಿಕ ಸೇವೆಯ ಬಳಿಕ 2020 ರಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆಯಿಂದಾಗಿ ನಿವೃತ್ತಿ ಹೊಂದಿ ಕಲ್ಯಾಣಪುರದಲ್ಲಿ ನಿವೃತ್ತ ಯಾಜಕರ ನಿವಾಸ ಮಿಲಾಗ್ರಿಸ್ ಹೋಮ್ ನಲ್ಲಿ ವಾಸ್ತವ್ಯ ಹೊಂದಿದ್ದರು.ಮೃತರ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಧರ್ಮಗುರುಗಳು ಹಾಗೂ ಭಕ್ತವೃಂದ ಕಂಬನಿ ಮಿಡಿದಿದೆ.

    ದೈವಾಧೀನರಾದ ವಂ|ಲಾರೆನ್ಸ್ ಸಿ ಡಿಸೋಜಾ ಅವರ ಅಂತ್ಯಕ್ರಿಯೆ ನವೆಂಬರ್ 16 ಶನಿವಾರ ಬೆಳಿಗ್ಗೆ ನಡೆಯಲಿದ್ದು, 8.00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಇಡಲಾಗುವುದು. ಬೆಳಿಗ್ಗೆ 9.30 ಕ್ಕೆ ಬಲಿಪೂಜೆಯೊಂದಿಗೆ  ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ತಿಳಿಸಿದ್ದಾರೆ.

    Funeral Details:

    The Funeral Mass for Rev. Fr Dr Lawrence C. D’Souza will be celebrated on Saturday, 16 November 2024, at 09:30 a.m. at Mount Rosary Church, Santhekatte-Kallianpur, followed by burial in the Diocesan Priests’ Cemetery at Santhekatte. The body will be kept for public viewing and final respects from 08:00 a.m. on Saturday at Mount Rosary Church, Santhekatte.

    The Diocese of Udupi extends its heartfelt condolences to all who knew and loved Fr. Lawrence and invites the faithful to join in prayer for the repose of his soul. May he rest in peace and may his memory be a blessing.

     

    Read This also..

    ಮಂಗಳೂರು : ಬೋಂದೆಲ್ ಸಂತ ಲಾರೆನ್ಸರ ಚರ್ಚ್ ಗೆ ತ್ರಿವಳಿ ಸಂಭ್ರಮ, ನ.18ರಂದು ನವೀಕೃತ ಚರ್ಚ್ ಉದ್ಘಾಟನೆ ಹಾಗೂ ಆಶೀರ್ವಚನ..

    Share Information
    Advertisement
    Click to comment

    Leave a Reply

    Your email address will not be published. Required fields are marked *