LATEST NEWS
ಉಡುಪಿ – ರಸ್ತೆ ಹೊಂಡ ಅಳೆದ ಯಮರಾಜ ಮತ್ತು ಚಿತ್ರಗುಪ್ತ

ಉಡುಪಿ ಅಗಸ್ಟ್ 28: ಉಡುಪಿಯಲ್ಲಿ ಒಂದು ಕಡೆ ಅಷ್ಟಮಿ ಸಂಭ್ರಮವಾದರೇ ಇನ್ನೊಂದೆಡೆ ಉಡುಪಿ ಜಿಲ್ಲೆಯ ರಸ್ತೆ ಅವ್ಯವಸ್ಥೆ ನೋಡಲು ಸ್ವತಃ ಯಮರಾಜನೇ ಯಮಲೋಕದಿಂದ ಭೂಲೋಕಕ್ಕೆ ಬಂದಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಉಡುಪಿಯ ರಸ್ತೆಗಳ ಸ್ಥಿತಿ
ಆದಿ ಉಡುಪಿಯಲ್ಲಿ ಯಮರಾಜ ಮತ್ತು ಚಿತ್ರಗುಪ್ತ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳ ಆಳ ಅಗಲ ಅಳೆಯುುವ ವಿಡಿಯೋ ಇದಾಗಿದ್ದು, ಜಿಲ್ಲಾಡಳಿತ ಜನಪ್ರತಿನಿಧಿಗಳು ರಸ್ತೆ ವಿಚಾರದಲ್ಲಿ ಎಷ್ಟು ಸಿರಿಯಸ್ ಆಗಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಈ ಬಾರಿ ಅಷ್ಟಮಿಯಲ್ಲಿ ನಾಲ್ಕೈದು ಯುವಕರ ತಂಡವೊಂದು ವಿಭಿನ್ನ ವೇಷಗಳ ಮೂಲಕ ಮಲ್ಪೆ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿರುವ ವಿಭಿನ್ನ ಪ್ರಯತ್ನ ಮಾಡಿದೆ.

ಯಮಧರ್ಮ ಮತ್ತು ಚಿತ್ರಗುಪ್ತ ವೇಷ ಧರಿಸಿದ ತಂಡ ಹೆದ್ದಾರಿಯಲ್ಲಿರುವ ಬಾರೀ ಹೊಂಡಗಳನ್ನು ಟೇಪ್ ಹಿಡಿದು ಅಳೆದು, ಈ ಹೊಂಡದಲ್ಲಿ ಬಿದ್ದವರು ಹೇಗೆ ಯಮಲೋಕಕ್ಕೆ ಹೋಗುತ್ತಾರೆ ಎನ್ನುವುದನ್ನು ವಿಡಂಬನೆ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.