LATEST NEWS
ಉಡುಪಿ ಮಳೆ ಆರ್ಭಟ – ಕಟಪಾಡಿಯಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಮರ
ಉಡುಪಿ ಜುಲೈ 15: ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ತಗ್ಗು ಪ್ರದೇಶಗಳಿಗೆ ನೀರು ತುಂಬಿದ್ದು,ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಮನೆಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ಇನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಂಭಾಗದಲ್ಲಿ ಸುಮಾರು ವರ್ಷಗಳ ಹಿಂದಿನ ಮರ ಬಿದ್ದು ವಿದ್ಯುತ್ ಕಂಬ ಮತ್ತು ಮನೆಗೆ ಹಾನಿಯಾಗಿದ್ದು, ರಾತ್ರಿ ಸುರಿದ ಗಾಳಿ ಮಳೆಗೆ ಸುಮಾರು ವರ್ಷಗಳ ಹಿಂದಿನ ಮರ ಬಿದ್ದು ಟ್ರಾನ್ಸ್ಫಾರ್ಮರ್ ವಿದ್ಯುತ್ ಕಂಬ ಹಾನಿಯಾಗಿದ್ದು ಮೆಸ್ಕಂ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ತೆರವು ಕಾರ್ಯ ನಡೆದಿದ್ದು ಸತತವಾಗಿ ಸುರಿಯುವ ಮಳೆಯಿಂದಾಗಿ ತೆರವು ಕಾರ್ಯಕ್ಕೆ ಅಡಚಣೆಯಾಗಿದೆ. ವಿಶ್ವನಾಥ ಕ್ಷೇತ್ರದ ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯಿಡೀ ಜನರು ಕಳೆಯುವಂತಾಗಿದೆ. ಕ್ಷೇತ್ರದ ಮುಂಭಾಗದಲ್ಲಿರುವ ಈ ಮರಕ್ಕೆ ಸುಮಾರು ವರ್ಷ ಗಳಾಗಿದ್ದು ಎರಡು ಮನೆಗಳ ನಡುವೆ ಬಿದ್ದ ಕಾರಣ ಯಾವುದೇ ಜೀವಹಾನಿ ಆಗಿಲ್ಲ
ಕುಂದಾಪುರ ತಾಲೂಕಿನ ಬಸ್ರೂರಿನ ಮಕ್ಕಿಮನೆ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದಿದ್ದು, ಮನೆಯೊಳಗಿದ್ದ ದಂಪತಿಗಳಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.