LATEST NEWS
ಉಡುಪಿ ಮಳೆ ಅಬ್ಬರ – ಮನೆಗಳಿಗೆ ನುಗ್ಗಿದ ನೀರು
ಉಡುಪಿ ಜುಲೈ 18: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ನೆರೆ ಹಾವಳಿ ತಲೆದೋರಿದ್ದು, ಜಿಲ್ಲೆಯ ನದಿಗಳು ಉಕ್ಕಿಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕರಾವಳಿಯ ಜಿಲ್ಲೆಗಳಲ್ಲಿ ಮುಂಗಾರ ಮಳೆ ಅಬ್ಬರ ಮುಂದುವರೆದಿದ್ದು, ನಿನ್ನೆ ರಾತ್ರಿಯಿಂದ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನಲೆ ಉಡುಪಿಯ ಕಾಪು ಮಜೂರು, ಮಠದ ಬೆಟ್ಟು, ಕಲ್ಸಂಕ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ, ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯಿಂದಾಗಿ ತಗ್ಗು ಪ್ರದೇಶಗಲ್ಲಿ ನೀರು ನುಗ್ಗಿದ್ದು, ನೆರೆ ಬೀತಿ ಉಂಟಾಗಿದೆ. ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಅನಾರೋಗ್ಯ ಪೀಡಿತ ಮಹಿಳೆಯನ್ನು ಕುರ್ಚಿಯಲ್ಲಿ ಹೊತ್ತು ಸುರಕ್ಷಿತ ಸ್ಥಳಕ್ಕೆ ಯುವಕರು ಸಾಗಿಸಿದ್ದಾರೆ. ಕಾಲಿಗೆ ಬ್ಯಾಂಡೆಜ್ ಸುತ್ತಿದ ಕಾರಣ ಮಹಿಳೆ ನಡೆಲಾಗದ ಸ್ಥಿತಿಯಲ್ಲಿ ಇದ್ದರು.