ಉಡುಪಿ, ಮೇ 04 : ಅಧಿಕಾರಿಗಳ ಕಣ್ತಪ್ಪಿಸಿ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ಸನ್ನು ಉಡುಪಿ ನಗರ ಪೊಲೀಸರು ಇಂದು ಮುಟ್ಟುಗೋಲು ಹಾಕಿದ್ದಾರೆ.
ಮಂಗಳೂರಿನಿಂದ ಬೆಳಗಾವಿಗೆ ಈ ಖಾಸಗಿ ಬಸ್ ರೋಗಿಯನ್ನು ಸಾಗಿಸುವ ನೆಪದಲ್ಲಿ ಹೊರಟಿತ್ತು. ಒಬ್ಬ ರೋಗಿ ಸಹಿತ ಬಸ್ಸಿನಲ್ಲಿ 11 ಮಂದಿ ಪ್ರಯಾಣಿಕರಿದ್ದರು. ಉಡುಪಿ ನಗರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ ಸಂಶಯಗೊಂಡ ಪೊಲೀಸರು ಮಾಹಿತಿ ಪಡೆದು ನಗರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದಾರೆ.
ಉಡುಪಿ ನಗರ ಠಾಣಾ ಪೊಲೀಸರಿಂದ ತನಿಖೆ ಮುಂದುವರಿದಿದೆ. ಬಸ್ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಪ್ರಯಾಣಿಕರ ಸಾಗಾಟ ಮಾಡಿ ಕೊರೊನಾ ರೋಗ ಹಬ್ಬಲು ಕಾರಣರಾಗಿರುವ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ. ಬಸ್ ನಲ್ಲಿದ್ದ ರೋಗಿಯನ್ನು ಬೆಳಗಾವಿಗೆ ಕಳುಹಿಸಲು ಬದಲಿ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದಾರೆ.
Video: