Connect with us

LATEST NEWS

ಉಡುಪಿ – ಪ್ರಯಾಣಿಕರ ಜೀವದ ಜೊತೆ ಖಾಸಗಿ ಬಸ್ ಗಳ ಚೆಲ್ಲಾಟ

ಉಡುಪಿ ಜೂನ್ 18: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಖಾಸಗಿ ಬಸ್ ಗಳು ಮಾತ್ರ ರಾಕೆಟ್ ವೇಗದಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಖಾಸಗಿ ಬಸ್ ವೇಗವಾಗಿ ಬಂದು ಬ್ರೇಕ್ ಹಾಕಿದ ಪರಿಣಾಮ 180 ಡಿಗ್ರಿ ತಿರುಗಿ ನಿಂತಿದೆ.


ಉಡುಪಿಯಲ್ಲಿ ಖಾಸಗಿ ಬಸ್ಗಳ ಹುಚ್ಚಾಟ ಮಿತಿಮೀರಿದೆ ಪ್ರಯಾಣಿಕರ ಜೊತೆ ಕೆಲವು ಖಾಸಗಿ ಬಸ್ ಚಾಲಕರು ಚೆಲ್ಲಾಟ ಮಾಡ್ತಿದ್ದಾರೆ ಕುಂದಾಪುರದಿಂದ ಉಡುಪಿ ನಗರ ಪ್ರವೇಶಿಸುತ್ತಾ ಇದ್ದ ದುರ್ಗಾಂಬ ಬಸ್ ಏಕಾಏಕಿ ಬ್ರೇಕ್ ಹಾಕಿ 180 ಡಿಗ್ರಿ ಸುತ್ತಿದ ಘಟನೆ ಉಡುಪಿ ನಗರದ ಬನ್ನಂಜೆ ಬಳಿ ಘಟನೆ ನಡೆದಿದೆ.


ಬಸ್ ತಿರುಗಿದ ರಭಸಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಆಘಾತಕ್ಕೊಳಗಾಗಿದ್ದಾರೆ. ಆದರೆ ಚಾಲಕ ಏನು ಆಗದಂತೆ ಅತಿ ವೇಗದಿಂದ ಬಸ್ ಓಡಿಸಿದ್ದಾನೆ ಮತ್ತೊಮ್ಮೆ ರಾಂಗ್ ಸೈಡ್ನಲ್ಲಿ ಹೋಗಿ ಯುಟರ್ನ್ ತೆಗೆದು ತೆಗೆದುಕೊಂಡು ಅತಿ ವೇಗದಿಂದ ಬಸ್ ಓಡಿಸಿದ್ದಾನೆ ದುರ್ಗಾಂಬ ಬಸ್ ಚಾಲಕನ ಹುಚ್ಚಾಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *