LATEST NEWS
ಉಡುಪಿಯಲ್ಲಿ ಮುಸ್ಲಿಂ ಅಂಗಡಿ ಹೆಸರು ಬದಲಿಸುವಂತೆ ಆಗ್ರಹ
ಉಡುಪಿ ಎಪ್ರಿಲ್ 2: ಉಡುಪಿಯಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಕೊನೆಗೂ ಹಲಾಲ್ ವಿವಾದಕ್ಕೆ ತಿರುಗಿದ್ದು, ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಇದೀಗ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳ ಹೆಸರು ಬದಲಾವಣೆ ಮಾಡಿಸುವವರೆಗೆ ಬಂದು ನಿಂತಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಫೂಟ್ ವೇರ್ ಅಂಗಡಿಯ ಹೆಸರು ಬದಲಿಸುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ. ಸಾಲಿಗ್ರಾಮ ಪಟ್ಟಣದ ಮುಖ್ಯರಸ್ತೆಯಲ್ಲಿ ಹಿಂದೂ ದೇವರ ಹಾಗೂ ಪ್ರಸಿದ್ಧ ಕ್ಷೇತ್ರದ ಹೆಸರನಿಟ್ಟುಕೊಂಡು ವ್ಯವಹರಿಸುತ್ತಿರುವ “ಸಾಲಿಗ್ರಾಮ ಫ್ಯಾನ್ಸೀ ಮತ್ತು ಪುಟ್ ವೇರ್” ಹೆಸರು ಬದಲಾಯಿಸುವಂತೆ ಒತ್ತಾಯಿಸಲಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಹಿಂದೂ ಜಾಗರಣಾ ವೇದಿಕೆ ಮನವಿ ನೀಡಿದೆ.
ಅಂಗಡಿ ಮಾಲೀಕ ಹಿಜಬ್ ಸಂಬಂಧಿಸಿದ ಕೋರ್ಟ್ ತೀರ್ಪು ವಿಚಾರದಲ್ಲಿ ಬಂದ್ ಮಾಡಿದ್ದರು. ಮುಸ್ಲಿಂ ಸಮುದಾಯ ನಮ್ಮ ಪವಿತ್ರ ಕ್ಷೇತ್ರದ ಹೆಸರು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ. ವ್ಯಾವಹಾರಿಕಾ ಅಂಗಡಿಯ ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.