Connect with us

LATEST NEWS

ಉಡುಪಿ – ಸಾಲ ವಾಪಾಸ್ ಕೇಳಿದ ಸ್ನೇಹಿತನ ಮುಗಿಸಿ ಆತ್ಮಹತ್ಯೆ ಕಥೆ ಕಟ್ಟಿದ್ದವ ಈಗ ಪೊಲೀಸ್ ಅತಿಥಿ

ಉಡುಪಿ: ಸ್ನೇಹಿತನಿಂದ ಹಣ ತೆಗೆದುಕೊಂಡು ಅದನ್ನು ವಾಪಾಸ್ ಕೇಳಿದಕ್ಕೆ ಆತನನ್ನೆ ಮುಗಿಸಿ ಆತ್ಮಹತ್ಯೆ ಕಥೆ ಕಟ್ಟಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ತಾಲ್ಲೂಕಿನ ಕುಕ್ಕೆಹಳ್ಳಿಯ ದಿನೇಶ ಸಫಲಗ (42) ಬಂಧಿತ ಆರೋಪಿ. ಕೊಲೆಯಾದವರನ್ನು ಕೃತಿಕ್‌ ಜೆ.ಸಾಲಿಯಾನ್. ಸೆಪ್ಟಂಬರ್ 14ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ–ಬಜೆ ಸಮೀಪದ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೃತಿಕ್‌ ಜೆ.ಸಾಲಿಯಾನ್ ಶವ ಪತ್ತೆಯಾಗಿತ್ತು.


ಮೊದಲು ಆತ್ಮಹತ್ಯೆ ಎಂದು ಕೊಂಡಿದ್ದ ಪೊಲೀಸರಿಗೆ ಮೃತನ ಅತ್ತೆ ಶೈಲಜಾ ಕರ್ಕೇರಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಕೃತಿಕ್‌ ಸಾಲಿಯಾನ್‌‌ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ಡ್ರಾ ಆಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಸಾಕ್ಷ್ಯಗಳ ಆಧಾರದ ಮೇಲೆ ದಿನೇಶ ಸಫಲಗ ಎಂಬಾತನ ಮೇಲೆ ಅನುಮಾನಗೊಂಡು ಆತನ ಚಲನ ವಲನಗಳ ಬಗ್ಗೆ 15 ದಿನಗಳಿಂದ ನಿಗಾ ಇರಿಸಿದಾಗ, ಕೃತಿಕ್ ಜತೆ ದಿನೇಶ್‌ ಹಣಕಾಸು ವ್ಯವ್ಯವಹಾರ ಬಯಲಾಯಿತು. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿತ್ತು.

ಆರೋಪಿ ದಿನೇಶ ಸಫಲಗ ಕೃತಿಕ್‌ ಸಲ್ಯಾನ್‌ ಬಳಿ 9 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಾಲ ಪಡೆದಿದ್ದ. ಕೃತಿಕ್ ಸಾಲ ಮರಳಿಸುವಂತೆ ಹಲವು ಬಾರಿ ಕೇಳಿದರೂ ದಿನೇಶ್‌ ಕೊಟ್ಟಿರಲಿಲ್ಲ. ಹಣ ಕೊಡದೆ ವಂಚನೆ ಎಸಗುವ ಉದ್ದೇಶದಿಂದ ಕೃತಿಕ್‌ಗೆ ಪರಿಚಯವಿದ್ದ ಮಹಿಳೆಯೊಬ್ಬರ ಹೆಸರನ್ನು ಬಳಸಿಕೊಂಡು ಆತನ ಕೊಲೆಗೆ ಷಡ್ಯಂತ್ರ ರೂಪಿಸಿದ. ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಹಿಳೆಗೆ ಕಳಿಸಿದರೆ ಆಕೆಯನ್ನು ಒಲಿಸಿಕೊಳ್ಳಬಹುದು ಎಂದು ಕೃತಿಕ್‌ಗೆ ದಾರಿ ತಪ್ಪಿಸಿ ಆತನಿಂದಲೇ ಡೆತ್ ನೋಟ್ ಕೂಡ ಬರೆಸಿದ.

ಸೆ.14ರಂದು ಬೆಳಗಿನ ಜಾವ ಮನೆಯ ಸಮೀಪದ ಹಾಡಿಗೆ ಕರೆದೊಯ್ದು ನೇಣುಹಾಕಿಕೊಳ್ಳುವಂತೆ ನಟಿಸಲು ಕೃತಿಕ್‌ಗೆ ಸೂಚಿಸಿದ. ಆರೋಪಿಯ ಮಾತುನಂಬಿದ ಕೃತಿಕ್‌ ಕಲ್ಲಿನ ಮೇಲೆ ನಿಂತು ಕುತ್ತಿಗೆಗೆ ಹಗ್ಗ ಹಾಕಿಕೊಳ್ಳುತ್ತಿದ್ದಂತೆ ನಿಂತಿದ್ದ ಕಲ್ಲನ್ನು ಕೆಳಗೆ ಬೀಳಿಸಿದ್ದಾನೆ. ಹಗ್ಗದ ಕುಣಿಕೆ ಕುತ್ತಿಗೆಯನ್ನು ಬಿಗಿದುಕೊಂಡು ಕೃತಿಕ್ ಪ್ರಾಣ ಬಿಟ್ಟಿದ್ದಾನೆ. ಬಳಿಕ ಆರೋಪಿ ದಿನೇಶ್‌ ಆತ್ಮಹತ್ಯೆ ಕಥೆ ಸೃಷ್ಟಿಸಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *