LATEST NEWS
ಉಡುಪಿ ನಗರಸಭೆ ಸದಸ್ಯೆ ಸೆಲೀನ್ ಕರ್ಕಡಾ ನಿಧನ
ಉಡುಪಿ ಅಕ್ಟೋಬರ್ 30: ಉಡುಪಿ ನಗರಸಭೆ ಸದಸ್ಯೆ ಸೆಲೀನ್ ಕರ್ಕಡಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಪ್ರಸ್ತುತ ಮೂಡು ಪೆರಂಪಳ್ಳಿ ವಾರ್ಡ್ನ ಚುನಾಯಿತ ಪ್ರತಿನಿಧಿಯಾಗಿದ್ದ ಸೆಲೀನ್, 2013-14ರ ಅವಧಿಯಲ್ಲಿ ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇನ್ನು ಸೆಲೀನ್ ಕರ್ಕಡಾ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ಮಹಿಳಾ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸೆಲಿನ ಕರ್ಕಡ ಅವರ ನಿಧನಕ್ಕೆ ಶಾಸಕ ರಘುಪತಿ ಭಟ್ ತಮ್ಮ ಸಂತಾಪ ಸೂಚಿಸಿದ್ದು, ಉಡುಪಿ ನಗರ ಸಭಾ ಸದಸ್ಯರಾದ ಸೆಲಿನ ಕರ್ಕಡ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ ಎಂದಿದ್ದಾರೆ.