LATEST NEWS
ಉಡುಪಿ ಶಾಸಕ ರಘುಪತಿ ಭಟ್ ಗೂ ಕೊರೋನ ಪಾಸಿಟಿವ್…!

ಉಡುಪಿ, ಅಕ್ಟೋಬರ್ 11: ಮಹಾಮಾರಿ ಕೊರೋನಾ ಉಡುಪಿ ಶಾಸಕ ರಘುಪತಿ ಭಟ್ ಗೂ ವಕ್ಕರಿಸಿದೆ. ಸೋಂಕಿನ ಹಿನ್ನೆಲೆಯಲ್ಲಿ ಉಡುಪಿ ಖಾಸಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಮಸ್ಕಾರಗಳು, ಆತ್ಮಿಯರೇ,#COVID -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಚಿಕಿತ್ಸೆ ಕಾರಣ ಸ್ವಲ್ಪ ದಿನ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ.
ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಒಳಗಾಗಿ ಜಾಗ್ರತೆ ವಹಿಸಿ. ಧನ್ಯವಾದಗಳು.— MLA Raghupathi Bhat BJP (@RaghupathiBhat) October 11, 2020
ಸೋಂಕು ದೃಡಪಟ್ಟಿರುದಾಗಿ ಟ್ವಿಟ್ ಮಾಡಿದ ರಘುಪತಿ ಭಟ್ ಅವರು “ನಮಸ್ಕಾರಗಳು, ಆತ್ಮಿಯರೇ, #COVID -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಗೆ ದಾಖಲಾಗಿರುತ್ತೇನೆ. ಚಿಕಿತ್ಸೆ ಕಾರಣ ಸ್ವಲ್ಪ ದಿನ ನಿಮ್ಮ ಕರೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷಮೆ ಇರಲಿ. ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಒಳಗಾಗಿ ಜಾಗ್ರತೆ ವಹಿಸಿ. ಧನ್ಯವಾದಗಳು” ಎಂದು ಮನವಿ ಮಾಡಿದ್ದಾರೆ.

ನಿನ್ನೆಯಷ್ಟೇ ಭಟ್ ಅವರು ಶಿವಮೊಗ್ಗದಲ್ಲಿ ನಡೆದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ಕ್ವಾರಂಟೈನ್ ಆಗ ಬೇಕಿದೆ.