LATEST NEWS
ಉಡುಪಿ ಎಂಜಿಎಂ ಕಾಲೇಜಿಗೆ ಎಂಟ್ರಿ ಕೊಟ್ಟ ಹಿಜಾಬ್ – ಕೇಸರಿ ಶಾಲು ವಿವಾದ
ಉಡುಪಿ ಫೆಬ್ರವರಿ 07: ಕೇಸರಿ ಮತ್ತು ಹಿಜಬ್ ವಿವಾದ ಇದೀಗ ಉಡುಪಿಯ ಪ್ರತಿಷ್ಠಿತ ಕಾಲೇಜು ಎಂಜಿಎಂ ಗೂ ಹಬ್ಬಿದ್ದು, ಮಣಿಪಾಲದಲ್ಲಿರುವ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ತೆಗೆದು ಪ್ರವೇಶಿಸಲು ಇತರ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ರಾಜ್ಯ ಸರಕಾರ ಆದೇಶದ ಪ್ರಕಾರ ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಬ್ ತೆಗೆದು ಕಾಲೇಜಿಗೆ ಆಗಮಿಸಬೇಕೆಂದು ವಿಧ್ಯಾರ್ಥಿಗಳು ಗುಂಪು ಆಗ್ರಹಿಸಿದೆ. ಒಂದು ವೇಳೆ ಆದೇಶ ಪಾಲನೆ ಮಾಡದೆ ಇದ್ದರೆ, ಕೇಸರಿ ಶಾಲು ಹಾಕೋದಾಗಿ ಹಿಂದೂ ವಿದ್ಯಾರ್ಥಿಗಳ ಗುಂಪು ಎಚ್ಚರಿಕೆ ನೀಡಿದೆ. ಎರಡೂ ಗುಂಪಿನ ವಿದ್ಯಾರ್ಥಿ ಗಳ ಜೊತೆ ಮಾತುಕತೆ ನಡೆಸಿದ ಕಾಲೇಜು ಪ್ರಾಂಶುಪಾಲರು,ನಾಳೆಯಿಂದ ಹಿಜಾಬ್ ತೆಗೆದು ತರಗತಿ ಪ್ರವೇಶಿಸಲು ಸೂಚಿಸಿದ್ದಾರೆ.
ಹಿಜಾಬ್ ತೆಗೆಯದಿದ್ದರೆ ನಾಳೆ ಕೇಸರಿ ಶಾಲು ಹಾಕೋದಾಗಿ ವಿದ್ಯಾರ್ಥಿಗಳ ಗುಂಪೊಂದು ಎಚ್ಚರಿಸಿದ್ದು,ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದಿದ್ದರೆ ವಿದ್ಯಾರ್ಥಿಗಳು ಕೇಸರಿ ಶಾಲು,ಪಂಚೆ,ರುದ್ರಾಕ್ಷಿ ಮಾಲೆ ಧರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದೂ ಜಾಗರಣ ವೇದಿಕೆ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟಿಸಿರುವ ಬಗ್ಗೆ ತಿಳಿದುಬಂದಿದ್ದು, ವಿದ್ಯಾರ್ಥಿಗಳ ಮೂಲಕ ಹಿಜಾಬ್ ನಿಲ್ಲಿಸುವ ಎಚ್ಚರಿಕೆ ನೀಡಿದೆ.