LATEST NEWS
ಮಹಾರಾಷ್ಟ್ರದಿಂದ ಮತ್ತೆ ಉಡುಪಿಗೆ ಆಗಮಿಸಲಿದ್ದಾರೆ ಕರಾವಳಿಗರು…!!
ಉಡುಪಿ ಡಿಸಿ ಟೇಬಲ್ ಮೇಲೆ ಕನಿಷ್ಟ ಐದು ಸಾವಿರ ಅಪ್ಲಿಕೇಷನ್‍ಗಳು
ಉಡುಪಿ ಜೂನ್ 11: ಕಳೆದ ಎರಡು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ನಿಟ್ಟುಸಿರು ಬಿಟ್ಟಿರುವ ಉಡುಪಿ ಜಿಲ್ಲೆಗೆ ಈಗ ಮತ್ತೆ ಆತಂಕ ಎದುರಾಗಿದ್ದು, ಎರಡನೇ ಪಾಳಿಯಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಲು 7 ಸಾವಿರ ಕರಾವಳಿಗರು ರೆಡಿಯಾಗಿದ್ದಾರೆ.
ಗ್ರೀನ್ ಝೋನ್ ನಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಕಂಡು ಬಂದ ಕೊರೊನಾ ಸೊಂಕಿನಿಂದಾಗಿ ಇಡೀ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಏರಿಕೆಯಾಗಿದೆ. ಇನ್ನು ಇಲ್ಲಿಯವರೆಗೆ ಮಹಾರಾಷ್ಟ್ರದಿಂದ ಬಂದಿರುವ ಎಲ್ಲಾ ಕರಾವಳಿಗರ ಪರೀಕ್ಷೆ ನಡೆದಿದ್ದು, ಕಳೆದೆರುಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.
ಆದರೆ ಮತ್ತೆ ಮಹಾರಾಷ್ಟ್ರದಿಂದ ತವರಿಗೆ ಆಗಮಿಸಲು ಉಡುಪಿ ಡಿಸಿ ಟೇಬಲ್ ಮೇಲೆ ಕನಿಷ್ಟ ಐದು ಸಾವಿರ ಅಪ್ಲಿಕೇಷನ್‍ಗಳು ಸಿದ್ಧವಿದ್ದು, ಮಹಾರಾಷ್ಟ್ರದಿಂದ 7 ಸಾವಿರ ಜನ ಬರೋದಕ್ಕೆ ರೆಡಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕೇಸುಗಳ ಪೈಕಿ 327 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 619 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 1,200 ಮಂದಿ ಹೊರ ರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಹೊರ ರಾಜ್ಯದಿಂದ ಏಳೆಂಟು ಸಾವಿರ ಮಂದಿ ಬಂದರೆ ಅದರಲ್ಲಿ ಶೇ.10ರಷ್ಟು ಮಂದಿಯಲ್ಲಿ ಕೊರೊನಾ ಕಾಣಿಸಿಕೊಳ್ಳಲಿದೆ. ಹೊರರಾಜ್ಯದಿಂದ ಬರುವ ಶೇ.10 ಜನರಲ್ಲಿ ಸೋಂಕು ಕಂಡುಬರುತ್ತಿದೆ. ಹಾಗಾಗಿ ಉಡುಪಿಯಲ್ಲಿ 1200 ಬೆಡ್ ಕೆಪಾಸಿಟಿಯ 5 ಆಸ್ಪತ್ರೆಗಳನ್ನು ಕೋವಿಡ್‍ಗಳಿಗಾಗಿ ಮೀಸಲಿಡಲಾಗಿದೆ.
ಜೂನ್ 11ರವರೆಗೂ ಅರ್ಜಿ ಸಲ್ಲಿಸಿದ್ದ 160 ಮಂದಿಗೆ ಅನುಮತಿ ನೀಡಲಾಗಿದೆ. ಅದೇ ರೀತಿ ಜೂನ್ 12, 131 ಮಂದಿ, ಜೂನ್. 13 ರಂದು 76, ಜೂನ್ 14 ರಂದು 96 ಮಂದಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಗೆ ಬರುತ್ತಿದ್ದಂತೆಯೇ ಜನರು ಮೊದಲು ಡಿಆರ್’ಸಿ ಕೇಂದ್ರಕ್ಕೆ ಬರಬೇಕು. ಅಲ್ಲಿ ಕೈಗಳಿಗೆ ಕ್ವಾರಂಟೈನ್ ಕುರಿತು ಸ್ಟ್ಯಾಂಪ್ ಹಾಕಲಾಗುತ್ತದೆ. ಇದಕ್ಕಾಗಿ ಈಗಾಗಲೇ ಉಡುಪಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ 24*7 ಗಳು ಕಾರ್ಯನಿರ್ವಹಿಸುವ ಡಿಆರ್’ಸಿ ತೆರೆಯಲಾಗಿದೆ. ಅಗತ್ಯಬಿದ್ದರೆ, ಅಲ್ಲಿಂದಲೇ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಗೊಳಪಡಿಸುತ್ತಾರೆ. ಮಹಾರಾಷ್ಟ್ರದಿಂದ ಬಂದ ಜನರಿಗೆ 5 ದಿನಗಳೊಳಗಾಗಿ ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈವರೆಗಿನ ಚಿಕಿತ್ಸೆಯನ್ನು ಸರ್ಕಾರ ಮತ್ತು ಟಿಎಂಎಪೈ ಖಾಸಗಿ ಆಸ್ಪತ್ರೆ ಉಚಿತವಾಗಿ ಕೊಟ್ಟಿದೆ. ಲಾಕ್‍ಡೌನ್ ಸಂಪೂರ್ಣ ತೆರವು ಆದ ಮೇಲೆ ರೋಗಿಗಳ ಚಿಕಿತ್ಸಾ ವೆಚ್ಚ ಏನು ಎತ್ತ ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಕೊರೊನಾ ನಂಬರ್ ಒನ್ ಜಿಲ್ಲೆ ಎಂಬ ಕಳಂಕ ಹೊತ್ತಿರುವ ಉಡುಪಿ ಮತ್ತೆ ಗ್ರೀನ್ ಝೋನ್ ಆಗಲು ಮತ್ತಷ್ಟು ಸಮಯ ಬೇಕಾಗಬಹುದು