LATEST NEWS
ಲಾಕ್ ಡೌನ್ ಎಫೆಕ್ಟ್ – ಉಡುಪಿಯಲ್ಲಿ ಮನೆ ಹತ್ತಿರ ಬರುತ್ತಿದೆ ಒಂಟೆ ಸವಾರಿ…!!
ಉಡುಪಿ ಜೂನ್ 12: ಮಹಾಮಾರಿ ಕೊರೋನಾದಿಂದಾಗಿ ಲಾಕ್ ಡೌನ್ ನಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಯಾವಾಗಲು ಪ್ರವಾಸಿಗರಿಂದ ತುಂಬಿರುತ್ತಿದ್ದ ಮಲ್ಪೆ ಬೀಚ್ ಈಗ ಅನ್ನುತ್ತಿದೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಸರಕಾರ ಬಡ ಮತ್ತು ಶ್ರಮಿಕ ವರ್ಗಕ್ಕೆ ಪ್ರೋತ್ಸಾಹಧನ ನೀಡಿದೆ. ಪ್ರವಾಸಿಗರನ್ನು ನಂಬಿ ರಾಜಸ್ಥಾನದಿಂದ ಒಂಟೆ ಖರೀದಿಸಿ ಉಡುಪಿಗೆ ಬಂದು ಜೀವನ ಸಾಗಿಸುತ್ತಿದ್ದ ಸುನ್ನಲಾಲ್ ಈ ಸಂದರ್ಭದಲ್ಲಿ ಹೊಸ ಪ್ಲಾನ್ ಮಾಡಿದ್ದಾನೆ.
ಪ್ರವಾಸಿ ತಾಣಕ್ಕೆ ಜನ ಬಾರದ ಕಾರಣ ಒಂಟೆ ಸಾಕುವುದು ತನ್ನ ಜೀವನದ ಬಂಡಿ ದೂಡುವುದು ಬಹಳ ಕಷ್ಟವಾಗಿತ್ತು. ಒಂಟೆಯ ಜೊತೆ ಯುವಕ ದಿನಕ್ಕೊಂದು ರೆಸಿಡೆನ್ಸಿಯಲ್ ಏರಿಯಾಕ್ಕೆ ಬರುತ್ತಾನೆ. ಮಕ್ಕಳನ್ನು ಮನೆಯ ಮುಂದಿನ ರಸ್ತೆಯಲ್ಲೇ ಒಂಟೆಯ ಮೇಲೆ ಕೂರಿಸಿ ಒಂದು ಸುತ್ತು ಹೊಡೆಸುತ್ತಾನೆ.
ಹತ್ತಿಪ್ಪತ್ತು ರೂಪಾಯಿಗೆ ಒಂದು ಸುತ್ತು ಒಂಟೆ ಸವಾರಿ ಆಗುತ್ತದೆ. ಸರಕಾರದ ಸಹಾಯ ಸಿಗದ, ಪ್ರವಾಸೋದ್ಯಮ ಆರಂಭವಾಗಿದ್ದರಿಂದ ಈ ರೀತಿ ಜೀವನ ಮಾಡುತ್ತಿದ್ದಾನೆ.