LATEST NEWS
ಉಡುಪಿ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ – ಎಸ್ ಡಿಪಿಐ ಜಿಲ್ಲಾಧ್ಯಕ್ಷನ ಹೊಟೇಲ್ ತೆರವು

ಉಡುಪಿ ಮಾರ್ಚ್ 26: ಉಡುಪಿಯಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಷಣೆ ಮಾಡಿದ್ದು, ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಎಸ್ ಡಿಪಿಐ ಜಿಲ್ಲಾಧ್ಯಕ್ಷನ ಹೊಟೇಲ್ ನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಉಡುಪಿ ಜಾಮಿಯಾ ಮಸೀದಿ ಬಳಿ ನಿರ್ಮಾಣ ಮಾಡಿದ್ದ ಅಕ್ರಮ ಕಟ್ಟಡವನ್ನು ಉಡುಪಿ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷ್ಯರ ಮಾಲಿಕತ್ವದ ಹೋಟೆಲ್ ಕಟ್ಟಡ ಇದಾಗಿದ್ದು, ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಭಾರೀ ಪೊಲೀಸ್ ಭದ್ರತೆಯೊಂದಿಗೆ ಬೆಳ್ಳಂಬೆಳ್ಳಗೆ ಕಾರ್ಯಾಚರಣೆಗೆ ಇಳಿದ ನಗರಸಭೆಯೂ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದೆ.

ಹಿಜಬ್ ಹೋರಾಟದಲ್ಲಿ ಎಸ್‍ಡಿಪಿಐ, ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದರು. ಇವರ ಝರಾ ಹೋಟೆಲ್ ಕಟ್ಟಡದಲ್ಲಿರುವ ಝೈತರ್ ಆನ್ ಎಂಬ ಮಳಿಗೆಯನ್ನೂ ತೆರವು ಮಾಡಲಾಡಗಿದೆ. ಎರಡು ಬುಲ್ಡೋಜರ್, ಒಂದು ಕ್ರೇನ್, ಲಾರಿ ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು ,ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿತ್ತು.