LATEST NEWS
ಉಡುಪಿ ಜಿಲ್ಲೆಯಲ್ಲಿ ಮತ್ತೆ 16 ಗ್ರಾಮಪಂಚಾಯತ್ ಲಾಕ್ ಡೌನ್

ಉಡುಪಿ ಜೂನ್ 9:ಕೊರೊನಾ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಮತ್ತೆ 16 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಉಡುಪಿಯಲ್ಲಿ ಈ ಹಿಂದೆ 50ಕ್ಕೂ ಅಧಿಕ ಗ್ರಾಮಪಂಚಾಯತ್ ಗಳನ್ನು ಲಾಕ್ ಡೌನ್ ಮಾಡಲಾಗಿದ್ದು, ಲಾಕ್ ಡೌನ್ ಮಾಡಿರುವ ಗ್ರಾಮುಪಂಚಾಯತ್ ಗಳಲ್ಲಿ ಕೊರೊನಾ ಪ್ರಕರಣ ಕಡಿಮೆಯಾದ ಹಿನ್ನಲೆ ಮತ್ತೆ 50ಕ್ಕೂ ಅಧಿಕ ಕೊರೊನಾ ಪ್ರಕರಣಗಳಿರುವ ಮತ್ತೆ 16 ಗ್ರಾಮ ಪಂಚಾಯತ್ ಗಳನ್ನು ಲಾಕ್ ಡೌನ್ ಮಾಡಲಾಗಿದೆ.

ಜೂನ್ 10 ರಿಂದ ಜೂನ್ 14 ರವಿವಾರದ ವರೆಗೆ ಈ ಗ್ರಾಮ ಪಂಚಾಯಿತಿಗಳು ಸಂಪೂರ್ಣ ಲಾಕ್‌ಡೌನ್ ಆಗಿರಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಲಾಕ್‌ಡೌನ್‌ಗಾಗಿ ಹೊಸದಾಗಿ ಸೇರಿಸಲಾದ 16 ಗ್ರಾಮ ಪಂಚಾಯಿತಿಗಳು:
ಕಾರ್ಕಳ ತಾಲೂಕಿನ ಬೆಳ್ಮಣ್, ಮಿಯಾರ್, ಪಳ್ಳಿ, ಕುಕ್ಕುಂದೂರ್, ನಲ್ಲೂರು, ಮರ್ಣೆ ಬೈಂದೂರು ತಾಲ್ಲೂಕಿನ ಶಿರೂರ್, ಜಡ್ಕಲ್, ನಾಡಾ, ಕುಂದಾಪುರ ತಾಲೂಕಿನ ಗಂಗೊಳ್ಳಿ, ಆಲೂರು ಕಾಪು ತಾಲೂಕಿನ ಬೆಳ್ವೆ, ಶಿರ್ವ ಗ್ರಾಮ ಪಂಚಾಯತಿ ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ, ಅವರ್ಸೆ ಮತ್ತು ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯತಿ ಜೂನ್ 10ರ ಗುರುವಾರದಿಂದ ಜೂನ್ 14ರ ಸೋಮವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ.