LATEST NEWS
ಉಡುಪಿ : ನಾಡ ದೋಣಿ ಮಗುಚಿ ಮೀನುಗಾರ ಮೃತ್ಯು…!!

ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಕೋಟೇಶ್ವರ ಸಮೀಪ ಬೀಜಾಡಿ ಎಂಬಲ್ಲಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ದೋಣಿ ಮಗುಚಿ ಮೀನುಗಾರ ಮೃತಪಟ್ಟಿದ್ದಾರೆ.

ಬೀಜಾಡಿ ಗ್ರಾಮದ ಸಂಜೀವ(58) ಮೃತ ದುರ್ದೈವಿಗಳು. ಬೀಜಾಡಿ ಗ್ರಾಮದ ಚಾತ್ರಬೆಟ್ಟು ಎಂಬಲ್ಲಿ ಸಮುದ್ರದಲ್ಲಿ ಮಿನಿ-ಕೈರಂಪಣಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದ ನೀರಿನ ರಭಸಕ್ಕೆ ದೊಣಿ ಮಗುಚಿ ಮೀನುಗಾರಿಕೆ ಮಾಡುತ್ತಿದ್ದ ಸಂಜೀವ ಅವರು ಸಮುದ್ರದ ನೀರಿಗೆ ಬಿದ್ದು ಮುಳುಗಿದ್ದು ಅವರನ್ನು ಜೊತೆಯಲ್ಲಿರುವವರು ಮೇಲಕ್ಕೆ ಎತ್ತಿ ಕೋಟೇಶ್ವರ ಎನ್‌ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿದಾಗ ಸಂಜೀವ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
https://youtu.be/dhM10ie2ImQ
Continue Reading