Connect with us

LATEST NEWS

ಉಡುಪಿ – ನಕಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹೆಸರಲ್ಲಿ 2.3 ಕೋಟಿ ವಂಚನೆ

ಉಡುಪಿ ಮೇ 17: ವಾಟ್ಸ್‌ ಪ್ ನಲ್ಲಿ ಬಂದ ನಕಲಿ ಸ್ಟಾಕ್ ಮಾರ್ಕೆಟ್ ಗ್ರೂಪ್ ನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 2.3 ಕೋಟಿ ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಯಾನಂದ ಎಂಬುವವರನ್ನು ಅಪರಿಚಿತರು ‘ದಿ ವೆಲ್ತ್ ಆರ್ಕಿಟೆಕ್ಟ್’ ಎಂಬ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಸಿದ್ದು, ಆ ಗ್ರೂಪ್‌ನಲ್ಲಿ ಕೋಪರ್ನಿಕ್ ಡಿಮ್ಯಾಟ್ ಖಾತೆ ತೆರೆದು ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಸಂದೇಶಗಳು ಬರುತ್ತಿದ್ದವು. ಅದರಂತೆ ಏಪ್ರಿಲ್ 1ರಿಂದ ಮೇ 13ರವರೆಗೆ ಜಯಾನಂದ ಅವರು ಅಪರಿಚಿತರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹2.30 ಕೋಟಿ ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶನ್ನಾಗಲಿ ನೀಡದೆ ವಂಚನೆ ಮಾಡಲಾಗಿದೆ ಎಂದು ಜಯಾನಂದ ದೂರಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *