Connect with us

LATEST NEWS

ಉಡುಪಿ – ಸಾಲ ಸೌಲಭ್ಯಗಳಿಗೆ ಸಂಪರ್ಕಿಸುವಂತೆ ನಕಲಿ ಕರಪತ್ರ -ಮಾಹಿತಿ ನೀಡಬೇಡಿ ಎಂದ ಜಿಲ್ಲಾಡಳಿತ

ಉಡುಪಿ ಜನವರಿ 21: ಸಾಲ ಸೌಲಭ್ಯಗಳಿಗೆ ಸಂಪರ್ಕಿಸುವಂತೆ ಕರಪತ್ರ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಎಚ್ಚೆತ್ತ ಉಡುಪಿ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.


ಕೇವಲ ಮೊಬೈಲ್ ನಂಬ್ರ ಮಾತ್ರ ಹೊಂದಿರುವ ಈ ಕರಪತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಎಲ್ಲಾ ತರದ ಸಾಲ ಸೌಲಭ್ಯ ಗಳಿಗಾಗಿ ಸಂಬಂಧಿಸಿದ ದಾಖಲೆಗಳ ಜೊತೆ ಸಂಪರ್ಕಿಸುವಂತೆ ಎರಡು ಮೊಬೈಲ್ ನಂಬ್ರ ನೀಡಿರುವುದು ಕಂಡುಬರುತ್ತದೆ. ಆದರೆ ಸರಕಾರದ ಅಧಿಕೃತ ಪರವಾನಗಿಯನ್ನು ಸೂಕ್ತ ಪ್ರಾಧಿಕಾರದಿಂದ ಪಡೆಯದೆ ಹಾಗೂ ಸಂಸ್ಥೆಯ ಹೆಸರು, ವಿಳಾಸ ತಿಳಿಸದೆ, ಅನಧಿಕೃತವಾಗಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾರ್ವಜನಿಕರು ಈ ರೀತಿಯ ಪ್ರಚೋದನೆಗೆ ಒಳಗಾಗದೆ ಯಾವುದೇ ರೀತಿಯ ವ್ಯವಹಾರ, ದಾಖಲೆ ನೀಡುವುದು ಮಾಡದೇ ಇರುವುದು ಒಳಿತು. ಒಂದೊಮ್ಮೆ ಮಾಡಿದರೆ ಇದಕ್ಕೆ ಜಿಲ್ಲಾಡಳಿತ ಜವಾಬ್ದಾರಿ ಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *