Connect with us

UDUPI

ವಿಧಾನಸಭೆ ಚುನಾವಣೆ ಮತದಾನ – ಮಸ್ಟರಿಂಗ್ ಪ್ರಕ್ರಿಯೆ ಪ್ರಾರಂಭ

ಉಡುಪಿ ಮೇ 09: ನಾಳೆ ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆ ಹಿನ್ನಲೆ ಇಂದು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಮಸ್ಟರಿಂಗ್ ಪ್ರಕ್ರಿಯೆ ಪ್ರಾರಂಭವಾಗಿದೆ. ಉಡುಪಿಯ ಸೈಂಟ್ ಸಿಸಿಲಿಸ್ ಎಜುಕೇಶನ್ ಟ್ರಸ್ಟ್, ಕುಂದಾಪುರದ ಭಂಡಾರ್ಕಾಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಕಾಪು  ದಂಡತೀರ್ಥ ಪಿಯು ಕಾಲೇಜು, ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಪ್ರಕ್ರಿಯೆ ನಡೆಯುತ್ತಿದೆ.


ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್ ಯಂತ್ರಗಳನ್ನು ಪಡೆದುಕೊಂಡ ಸಿಬ್ಬಂದಿಗಳು ತಮ್ಮ ನಿಯೋಜಿತ ಮತಗಟ್ಟೆಗಳತ್ತ ತೆರಳುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಠು 1111 ಮತಗಟ್ಟೆಗಳು ಇದ್ದು ಒಟ್ಟು 175 ಬಸ್, 36 ಮಿನಿ‌ಬಸ್, 54 ಮ್ಯಾಕ್ಸಿಕ್ಯಾಬ್, 68 ಜೀಪ್ ಗಳನ್ನು ಚುನಾವಣಾ ಪ್ರಕ್ರಿಯೆಗಾಗಿ ಬಳಕೆ ಮಾಡಲಾಗಿದೆ. ಒಟ್ಟು 1336 ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್, 1446 ವಿ ವಿ ಪ್ಯಾಟ್ ಗಳ ಬಳಕೆಯಾಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *