LATEST NEWS
ಉಡುಪಿ: ವೈದ್ಯಕೀಯ ವಿದ್ಯಾರ್ಥಿನಿಯ ದೈಹಿಕ,ಲೈಂಗಿಕ ಹಿಂಸೆ, ಬಲವಂತದ ಮತಾಂತರ ಯತ್ನ ಪ್ರಕರಣ NIA ನೀಡಲು ಆಗ್ರಹ
ಉಡುಪಿ : ಉಡುಪಿಯ ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಗೆ ದೈಹಿಕ, ಲೈಂಗಿಕ ಹಿಂಸೆ ನೀಡಿ ಬಲವಂತವಾಗಿ ಇಸ್ಲಾಮಿಗೆ ಮತಾಂತರಕ್ಕೆ ಯತ್ನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ (NIA ) ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ವಿಹೆಚ್‌ಪಿ ಅಂಗ ಸಂಸ್ಥೆ ದುರ್ಗಾವಾಹಿನಿ ಜಿಲ್ಲಾ ಮಾತೃಶಕ್ತಿ ಜಿಲ್ಲಾಧಿಕಾರಿ ಹಾಗೂಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತಿದ್ದ ಹಿಂದೂ ಯುವತಿಯನ್ನು ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಸ್ಲಿಂ ಯುವಕ ಪ್ರೀತಿಯ ಹೆಸರಿನಲ್ಲಿ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದು ಮಾತ್ರವಲ್ಲದೆ, ದೈಹಿಕ ಹಿಂಸೆ, ಲೈಂಗಿಕ ಕಿರುಕುಳ ಕಿರುಕುಳ ಕೊಟ್ಟಿರುವ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೊಹಮದ್ ಡ್ಯಾನಿಷ್ ನನ್ನು ಪೊಲೀಸ್ ಇಲಾಖೆ ಬಂಧಿಸಿ ಕ್ರಮಕೈಗೊಂಡಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ದೇಶದಾದ್ಯಂತ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಟ್ಟುಕೊಂಡು ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡುವಂತ ವ್ಯವಸ್ಥಿತ ಸಂಚು ನಡೆಯುತ್ತಾ ಇದೆ, ಈ ರೀತಿ ಮತಾಂತರಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ರಾಷ್ಟ್ರ ವಿರೋಧಿ ಚಟುವಟಿಕೆಗೆ, ಭಯೋದ್ಪಾದಕ ಚಟುವಟಿಕೆಗೆ ಬಳಸಿರುವುದು ಸಾಕಷ್ಟು ಕೃತ್ಯಗಳು ದೇಶದಲ್ಲಿ ನಡೆದಿವೆ, ಹಾಗಾಗಿ ಈ ಪ್ರಕರಣದ ಹಿಂದೆ ಕೂಡ ಇದೇ ರೀತಿಯ ಸಂಚು ಹಾಗೆಯೇ ರಾಷ್ಟ್ರವಿರೋಧಿ ಸಂಘಟನೆಗಳ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು ಆದುದರಿಂದ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಿದರೆ ಸತ್ಯಾಂಶ ಹೊರಗೆ ಬರಲಿದೆ. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖೆ ದಳದ (NIA ) ಮುಖಾಂತರ ತನಿಖೆ ನಡೆಸಲು ಉಡುಪಿಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದೆ.