Connect with us

    LATEST NEWS

    ಉಡುಪಿ – ಬಸ್ ನಿಲ್ದಾಣದಲ್ಲಿ ಅಕ್ರಮ ಚಟುವಟಿಕೆ ಆರೋಪ: ಪೊಲೀಸರಿಂದ ನೈಟ್ ರೌಂಡ್ಸ್

    ಉಡುಪಿ ಡಿಸೆಂಬರ್ 04: ಉಡಪಿ ನಗರದ ಸಿಟಿಬಸ್ ನಿಲ್ದಾಣ ಸಮೀಪ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದ ಹಿನ್ನಲೆ ಉಡುಪಿ ನಗರ ಪೊಲೀಸರು ದಿಢೀರ್ ರಾತ್ರಿ ಕಾರ್ಯಾಚರಣೆ ನಡೆಸಿ ಪರಿಸೀಲನೆ ನಡೆಸಿದರು.


    ಉಡುಪಿ ಇನ್ಸ್ಪೆಕ್ಟರ್ ರಾಮಚಂದ್ರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ರಾತ್ರಿ ವೇಳೆ ನಗರದ ಬಸ್ ನಿಲ್ದಾಣ ಆಸುಪಾಸು ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ವೇಳೆ ಬಸ್ ನಿಲ್ದಾಣ ಪರಿಸರದಲ್ಲಿ ತಡ ರಾತ್ರಿಯವರೆಗೂ ನಿಂತಿದ್ದ ಜನರನ್ನು ಹೊರಗೆ ಕಳುಹಿಸಿದರು. ಅಲ್ಲದೆ ತಡರಾತ್ರಿ ಓಡಾಡುತ್ತಿದ್ದ ಜನರಿಗೆ ಎಚ್ಚರಿಕೆ ನೀಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *