Connect with us

LATEST NEWS

ಉಡುಪಿ : ನಕಲಿ ಚಿನ್ನ ಅಡವಿಟ್ಟು ವಂಚನೆ, ಉತ್ತರ ಕನ್ನಡದ ನಾಲ್ವರ ಬಂಧನ..!

 

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಜೀವ್ 30 ಗ್ರಾಂ ಗೋಲ್ಡ್ ಬಳಸಿ20 ಗ್ರಾಂ ಚಿನ್ನಾಭರಣದೊಂದಿಗೆ ಗಲ್ ರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ವಾಪಾಸಾಗುವ ವೇಳೆ 20 ಗ್ರಾಂ ಶುದ್ಧ ಚಿನ್ನದಾಭರಣವನ್ನೇ ಹಾಕಿಕೊಂಡು ಬರುವ ತನ್ನ ಪ್ಲಾನ್‌ಗೆ ಸಹಕರಿಸಲು ಪ್ರಕರಣದ ಇತರ ಆರೋಪಿಗಳಾದ ನಿತಿಲ್ ಭಾಸ್ಕರ್ ಶೇಟ್‌ನನ್ನು ಬಳಸಿಕೊಂಡಿದ್ದ. ಕುಮುಟಾದ ಇನ್ನಿಬ್ಬರು ಆರೋಪಿಗಳಿಂದ ನಕಲಿ ಚಿನ್ನದ ಆಭರಣಗಳನ್ನು ತಯಾರಿಸಿಕೊಂಡು ಬೆಳಗಾವಿಯಲ್ಲಿ ನಕಲಿ ಹಾಲ್‌ಮಾರ್ಕ್ ಮೊಹರನ್ನು ಹಾಕಲಾಗುತ್ತಿತ್ತು. ಆದರೆ ಆರೋಪಿ ರಾಜೀವ್ ತನ್ನ ಖತರ್‌ನಾಕ್ ಐಡಿಯಾವನ್ನು ಬದಲಾಯಿಸಿ, ಸ್ಥಳೀಯವಾಗಿ ಸೊಸೈಟಿ ಸಂಸ್ಥೆಗಳಿಗ ವಂಚನೆ ಮಾಡಲು ಶುರುವಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬ್ಯಾಂಕು, ಸೊಸೈಟಿಗಳಲ್ಲಿ ಚಿನ್ನಾಭರಣ ಈಡಿನ ಸಾಲವನ್ನಿತ್ತು ಮರಳಿ ಬಾರದೇ ಇದ್ದಾಗ ಏಲಂ ಪ್ರಕ್ರಿಯೆ ನಡೆಸಿ ಇದರಲ್ಲೂ ನಕಲಿ ಅಸಲಿಗಳನ್ನು ಪತ್ತೆ ಮಾಡಲಾಗಿರಲಿಲ್ಲ. ಕೇವಲ ಉಡುಪಿಯ ಬಿಡ್ಡುದಾರರೊಬ್ಬರು ಇದನ್ನು ಕತ್ತರಿಸಿ ಪರಿಶೀಲಿಸಿದಾಗ ಆರೋಪಿ ರಾಜೀವ್ ಮತ್ತು ಆತನ ಪತ್ನಿಯ ಚಿನ್ನಾಭರಣ ಸಾಲದ ವಂಚನೆ ಪ್ರಕರಣವು ಬೆಳಕಿಗೆಬಂತು. ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 29.94 ಲಕ್ಷ ರೂ. ಗಳನ್ನು ರಾಜೀವ್ ದಂಪತಿ ಪಡೆದಿದ್ದರು.ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪ-ಅಧೀಕ್ಷಕ ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರ ನಿರ್ದೇಶನದಂತೆ ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಎಂ. ಎಸ್. ಹಾಗೂ ಅವರ ಸಿಬಂದಿಗಳು ಪ್ರಕರಣವನ್ನು ಬೇಧಿಸಿದ್ದು ಇನ್ನಷ್ಟು ತನಿಖೆ ಮುಂದುವರಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *