LATEST NEWS
ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆಯ ಅತ್ಯಾಚಾರಕ್ಕೆ ಯತ್ನ

ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆಯ ಅತ್ಯಾಚಾರಕ್ಕೆ ಯತ್ನ
ಉಡುಪಿ: ಲಾಕ್ ಡೌನ್ ನಡುವೆ ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರೊನಾ ಲಾಕ್ ಡೌನ್ ಹಿನ್ನಲೆ ಮಹಿಳೆ ದಿನಸಿ ಕಿಟ್ ಪಡೆಯಲು ಸಂತಕಟ್ಟೆಯಿಂದ ಬ್ರಹ್ಮಾವರದ ಕುಂಜಾಲಿಗೆ ಬಂದಿದ್ದರು. ದಿನಸಿ ಕಿಟ್ ಪಡೆದುಕೊಂಡು ಬ್ರಹ್ಮಾವರದ ಕುಂಜಾಲು ಜಂಕ್ಷನ್ ಬಳಿಯ ನಿರ್ಜನ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಈ ವೇಳೆ ಲಿಫ್ಟ್ ಕೊಡುವದಾಗಿ ಹೇಳಿ ಮಹಿಳೆಯನ್ನ ಬೈಕಿನಲ್ಲಿ ಹತ್ತಿಸಿಕೊಂಡಿದ್ದಾನೆ.

ಮಹಿಳೆ ಬೈಕ್ ಹತ್ತುತ್ತಿದ್ದಂತೆ ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿದ್ದಂತೆ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.