DAKSHINA KANNADA
ಉಡುಪಿ: ಅಸಲಿ ಮಾಲಿಕರನ್ನು ಹುಡುಕಿ ಕಳೆದು ಹೋದ ‘ಕರಿಮಣಿ’ ಸರವನ್ನು ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಸ್ ಸಿಬಂದಿ..!

ಉಡುಪಿ : ಉಪೇಂದ್ರ ನಟನೆಯ ಹಳೇ ಸಿನಿಮಾದ ಕರಿಮಣಿ ಮಾಲೀಕ ನೀನಲ್ಲ ಅನ್ನುವ ಹಾಡು ಪ್ರಸ್ತುತ ಎಲ್ಲಾ ಕಡೆ ವೈರಲ್ ಆಗುತ್ತಿದ್ದರೆ, ಇಲ್ಲಿಬ್ಬರು ಪ್ರಾಮಾಣಿಕ ವ್ಯಕ್ತಿಗಳು ಕರಿಮಣಿ ಕಳೆದುಕೊಂಡ ಮಾಲೀಕರನ್ನು ಹುಡುಕಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಅದು ಕೂಡ…ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕುವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿ ಸರ ಅನ್ನೋದು ವಿಶೇಷವಾಗಿದೆ. ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸು ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಈ ಪ್ರಾಮಾಣಿಕತೆ ಮೆರೆದು ಇತರರರಿಗೆ ಆದರ್ಶರಾಗಿದ್ದಾರೆ. ಪ್ರಯಾಣಿಕರು ಬಸ್ ನಲ್ಲಿ ಕಳೆದುಕೊಂಡ ಸತ್ತುಗಳನ್ನು ಮರಳಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು, ಸಮಾಜದಲ್ಲಿ ಪ್ರಾಮಾಣಿಕತೆ ಎಂಬುವುದು ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
