UDUPI
ಉಡುಪಿ – ಆಧಾರ್ ಮತ್ತು ಎಪಿಕ್ ಜೋಡಣೆ ವಿಶೇಷ ನೋಂದಣಿ ಶಿಬಿರ
ಉಡುಪಿ, ಸೆಪ್ಟಂಬರ್ 01 : ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಲು ಸೆಪ್ಟಂಬರ್ 4 ಮತ್ತು 18 ನ್ನು ವಿಶೇಷ ನೋಂದಣಿ ದಿನಗಳನ್ನಾಗಿ ಆಯೋಜಿಸಲಾಗಿದ್ದು,
ಈ ದಿನಗಳಂದು ಉಡುಪಿ ಜಿಲ್ಲೆಯ ಮತದಾರರು ತಮ್ಮ ಹತ್ತಿರದ ಮತಗಟ್ಟೆಗಳಲ್ಲಿರುವ ಬಿ.ಎಲ್.ಓ ಅಧಿಕಾರಿಗಳನ್ನು ಸಂಪರ್ಕಿಸಿ, ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡಿಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.