LATEST NEWS
ಉಡುಪಿ – ಅಪಘಾತರಹಿತ ಚಾಲಕ ಪ್ರಶಸ್ತಿ ಪುರಸ್ಕೃತ ಅಲೆಕ್ಸಾಂಡರ್ ಕುಲಾಸೊ ನಿಧನ

ಉದ್ಯಾವರ ಫೆಬ್ರವರಿ 05: 40 ವರ್ಷಗಳ ಚಾಲಕರಾಗಿ ಕೆಲಸ ನಿರ್ವಹಿಸಿದ ಸಂದರ್ಭ ಯಾವುದೇ ಅಪಘಾತ ಮಾಡದೆ ಅಪಘಾತ ರಹಿತ ಚಾಲಕ ಪ್ರಶಸ್ತಿ ಪುರಸ್ಕೃತರಾಗಿದ್ದ ಉದ್ಯಾವರದ ಅಲೆಕ್ಸಾಂಡರ್ ಕುಲಾಸೊ (75) ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಪರ್ಕಳ – ಮಟ್ಟು ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಂಬರೀಶ್ ಬಸ್ ನಲ್ಲಿ ಸುಮಾರು 40ಕ್ಕೂ ಅಧಿಕ ವರ್ಷಗಳ ಕಾಲ ಚಾಲಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದ ಇವರು ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಹಾಸ್ಯದ ಮಾತುಗಳ ಮೂಲಕವೇ ಎಲ್ಲರ ಮನ ಗೆಲ್ಲುತ್ತಿದ್ದರು. ಸಿಟಿ ಬಸ್ಸಿನ ಚಾಲಕರಾಗಿದ್ದ ಇವರು ಕೆಲವೇ ವರ್ಷಗಳ ಹಿಂದೆ ತನ್ನ ವೃತ್ತಿಗೆ ನಿವೃತ್ತಿ ಹೇಳಿದ್ದರು. ಬಳಿಕ ಗುಡ್ಡೆಯಂಗಡಿ ಬಲಾಯ್ ಪಾದೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
