UDUPI
ಉಡುಪಿ 22 ಕೊರೊನಾ ಪ್ರಕರಣ ದೃಢ

ಉಡುಪಿ ಜೂನ್ 12: ಉಡುಪಿಯಲ್ಲಿ ಇಂದು 22 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಕೊರೋನಾ ಪೀಡಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ.
ಇಂದು ಮಹಾರಾಷ್ಟ್ರ ದಿಂದ ಬಂದ 21 ಜನರಲ್ಲಿ ಸೋಂಕು ಧೃಡಪಟ್ಟಿದ್ದು, ಇನ್ನೊಂದು ಪ್ರಕರಣದಲ್ಲಿ ಸೋಂಕಿತ 5451 ನಿಂದ ಸಂಪರ್ಕದಿಂದ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ. ಗುಜರಾತ್ ಮಹಿಳೆಯ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಕೊರನಾ ಸೊಂಕು ತಗುಲಿದೆ. ಇನ್ನು ಇಂದು 22 ಪ್ರಕರಣದಲ್ಲಿ 13 ಪುರುಷ, 6 ಮಹಿಳೆ ಮೂರು ಮಕ್ಕಳು ಸೇರಿದ್ದಾರೆ.

ಇಂದು ಉಡುಪಿಯಲ್ಲಿ ಒಂದೇ ದಿನ 129 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
Continue Reading