UDUPI
ಉಡುಪಿಯಲ್ಲಿ 109 ಕೊರೊನಾ ಪ್ರಕರಣ ದಾಖಲು
ಉಡುಪಿ ಜುಲೈ 16: ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 109 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು,ಕಳೆದ ಕೆಲವು ಸಮಯಗಳಲ್ಲಿ ನಂತರ ಕೊರೊನಾ ಸೊಂಕಿತರ ಸಂಖ್ಯೆ ಶತಕ ದಾಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ.
ಇಂದು ದಾಖಲಾದ ಪ್ರಕರಣಗಳಲ್ಲಿ ಬೈಂದೂರು ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳಿಗೆ ಕೊರೊನಾ ಸೊಂಕು ತಗುಲಿದ್ದು, ಬೈಂದೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಪಡುಬಿದ್ರೆಯಲ್ಲಿ ರಾಂಡಮ್ ಟೆಸ್ಟ್ ಸಂದರ್ಭ ಇಬ್ಬರು ಹೊಟೇಲ್ ಸಿಬ್ಬಂದಿ ಹಾಗೂ ವ್ಯವಹಾರ ಮಳಿಗೆಯ ಒರ್ವ ಸಿಬ್ಬಂದಿಗೆ ಕೊರೊನಾ ಸೊಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದ್ದು, 1462 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 428 ಸಕ್ರಿಯ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.