Connect with us

    LATEST NEWS

    ಯುಎಇ ಯಲ್ಲಿ ಪ್ರತಿಭಟನೆ ಮಾಡಿದ 57 ಬಾಂಗ್ಲಾದೇಶಿಗರನ್ನು 10 ವರ್ಷ ಜೈಲಿಗೆ ತಳ್ಳಿದ ಯುಎಇ ನ್ಯಾಯಾಲಯ

    ಯುಎಇ ಜುಲೈ 22: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯುಎಇಯಲ್ಲಿ ಪ್ರತಿಭಟನೆ ನಡೆಸಿದ 57 ಬಾಂಗ್ಲಾದೇಶಿಗರನ್ನು ಯುಎಇ ನ್ಯಾಯಾಲಯ 10 ವರ್ಷ ಜೈಲಿಗೆ ತಳ್ಳಿದೆ.


    ಬಾಂಗ್ಲಾದೇಶ ಸರ್ಕಾರವು ತೆಗೆದುಕೊಂಡ ಮಿಸಲಾತಿ ನಿರ್ಧಾರಗಳನ್ನು ವಿರೋಧಿಸಿ ಯುಎಇಯ ಹಲವಾರು ಬೀದಿಗಳಲ್ಲಿ ಬಾಂಗ್ಲಾದೇಶಿಗಳು ಪ್ರತಿಭಟನಾ ಜಾಥಾವನ್ನು ನಡೆಸಿದ್ದರು. ಏಳು ಶೇಖ್‌ಡಮ್‌ಗಳ ಒಕ್ಕೂಟವಾದ ಯುಎಇಯಲ್ಲಿ ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಕಾನೂನು ವಾಕ್ ಸ್ವಾತಂತ್ರ್ಯವನ್ನು ತೀವ್ರವಾಗಿ ನಿರ್ಬಂಧಿಸುತ್ತವೆ.

    ಯುಎಇಯಲ್ಲಿ ಬಾಂಗ್ಲಾದೇಶದ ವಲಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು, ಅಲ್ಲಿ ಕಡಿಮೆ ಸಂಬಳದ ಕೆಲಸಗಳನ್ನು ನಿರ್ವಹಿಸುತ್ತಾರೆ. ಇದೀಗ ಬಾಂಗ್ಲಾದೇಶದ ವಿರುದ್ದ ಯುಎಇಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಅಬುಧಾಬಿ ಫೆಡರಲ್ ಮೇಲ್ಮನವಿ ನ್ಯಾಯಾಲಯವು 53 ಬಾಂಗ್ಲಾದೇಶದ ಪ್ರಜೆಗಳಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಮತ್ತು ಮೂರು ಜೀವಾವಧಿ ಶಿಕ್ಷೆಯ ಜೊತೆಗೆ ಇನ್ನೊಬ್ಬರಿಗೆ 11 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಎಮಿರೇಟ್ಸ್ ನ್ಯೂಸ್ ಏಜೆನ್ಸಿ, WAM ಪ್ರಕಾರ. ಶಿಕ್ಷೆಯ ಅವಧಿ ಮುಗಿದ ನಂತರ ಈ ವ್ಯಕ್ತಿಗಳನ್ನು ಯುಎಇಯಿಂದ ಗಡಿಪಾರು ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *